Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಪ್ರಧಾನಿ ಮೋದಿಗೆ ಸೆಡ್ಡು ಹೊಡೆಯಲು ರಾಹುಲ್ ಗಾಂಧಿ ಸೂಕ್ತ ಪ್ರಧಾನಿ ಅಭ್ಯರ್ಥಿ: ಎಂಕೆ ಸ್ಟಾಲಿನ್

Bhupesh Baghel

ಭೂಪೇಶ್ ಬಾಘೆಲ್ ಛತ್ತೀಸ್ ಗಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ

Virat Kohli-Sourav Ganguly

2008ರಲ್ಲಿ ಗಂಗೂಲಿಗೆ, 2018ರಲ್ಲಿ ಕೊಹ್ಲಿಗೆ ಮಹಾ ಮೋಸ;? ನೆಟಿಗರು ಆಕ್ರೋಶ, ವಿಡಿಯೋ ವೈರಲ್!

Harbhajan Singh, Andrew Symonds

ಸೈಮಂಡ್ಸ್ ಕತೆ ಕಟ್ಟಿ ಜನರನ್ನು ಮಂಗನನ್ನಾಗಿ ಮಾಡ್ತಿದ್ದಾರೆ: ಹರ್ಭಜನ್ ಸಿಂಗ್

Chamarajanagar Temple prasad Tragedy: Death Toll Rises to 12

ವಿಷ ಪ್ರಸಾದ ದುರಂತ; ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಸಂಗ್ರಹ ಚಿತ್ರ

ಮಾವನಿಂದ ಅತ್ಯಾಚಾರ, ಸ್ವಲ್ಪ ಅಡ್ಜೇಸ್ಟ್ ಮಾಡ್ಕೋ ಎಂದ ಪತಿ; ನವವಿವಾಹಿತೆ ನೇಣಿಗೆ ಶರಣು!

PV Sindhu

ವರ್ಲ್ಡ್ ಟೂರ್ ಫೈನಲ್: ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ

RepresentatIonal image

ಬಾಗಲಕೋಟೆ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ: 6 ಸಾವು, ಐವರಿಗೆ ಗಾಯ

Geetanjali

ವಿನೋದ್ ಖನ್ನಾ ಮಾಜಿ ಪತ್ನಿ ಗೀತಾಂಜಲಿ ನಿಧನ

Poonam Pandey

ಮತ್ತೊಂದು ಅರೆ ನಗ್ನ ಸ್ನಾನದ ವಿಡಿಯೋ ಶೇರ್ ಮಾಡಿದ ಪೂನಂ ಪಾಂಡೆ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?

PM Modi

ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನ ಮಾಡುತ್ತಿದೆ: ನರೇಂದ್ರ ಮೋದಿ

People have started showing gotra, janeyu to become prominent in politics: Yogi

ರಾಜಕೀಯದಲ್ಲಿ ಪ್ರಾಮುಖ್ಯ ಪಡೆಯಲು ಜನ ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆ: ಯೋಗಿ

ಮುಖಪುಟ >> ಕ್ರಿಕೆಟ್

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ವೈಫಲ್ಯ: ಶಾಸ್ತ್ರಿ, ಕೊಹ್ಲಿ ಅವರ ಸ್ಪಷ್ಟನೆ ಕೇಳಲಿರುವ ಬಿಸಿಸಿಐ

Shastri-Kohli duo

ರವಿ ಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ

ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಭಾರತ -ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಯಲ್ಲಿ ಬಾರತ ಸತತ ಎರಡು ಪಂದ್ಯಗಳನ್ನು ಸೋತ ಬೆನ್ನಲ್ಲಿಯೇ ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ  ಅವರುಗಳನ್ನು ಬಿಸಿಸಿಐ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಟಿಂಗ್ ಹ್ಯಾಂ ನಲ್ಲಿ ಶನಿವಾರದಂದು ಮೂರನೇ ಪಂದ್ಯ ಪ್ರಾರಂಬಗೊಂಡ ಬಳಿಕ ನಾಲ್ಕು, ಐದನೇ ಟೆಸ್ಟ್ ಗಳಿಗಾಗಿ ಆಟಗಾರರ ಆಯ್ಜೆ ನಡೆಯಲಿದೆ. ಇದಕ್ಕೆ ಮುನ್ನ ಬಿಸಿಸಿಐ ರವಿಶಾಸ್ತ್ರಿ ಹಾಗೂ ಕೊಹ್ಲಿ  ಅವರಿಗೆ  0-2 ಅಂತರದ ಸೋಲಿನ ಕುರಿತು ಪ್ರಶ್ನಿಸಲು ತೀರ್ಮಾನಿಸಿದೆ.

" ದಕ್ಷಿಣ ಆಫ್ರಿಕಾದ ಸರಣಿಯನ್ನು ಸೋತಾಗ ಕೊಹ್ಲಿ ಆಟಗಾರರ ಬಿಡುವಿಲ್ಲದ ವೇಳಾಪಟ್ಟಿ, ಅಭ್ಯಾಸದ ಕೊರತೆಯೇ ಕಾರಣ ಎಂದಿದ್ದರು.ಆದರೆ ಈ ಬಾರಿ ಅವರು ಸಾಕಷ್ಟು ಸಮಯ ದೊರಕಿಲ್ಲ ಎನ್ನುವ ಹಾಗಿಲ್ಲ. ಟೆಸ್ಟ್ ಪಂದ್ಯದ ಮುನ್ನ ವೈಟ್ ಬಾಲ್ ಪಂದ್ಯಗಳನ್ನು ಆಯೋಜಿಸಲು ನಾವು ನಿರ್ಧರಿಸಿದ್ದೆವು. " ಹೆಸರು ಬಹಿರಂಗಪಡಿಸದ ಬಿಸಿಸಿಐ ಹಿರಿಯ ಅಧಿಕಾರಿಯ್ತೊಬ್ಬರು ಪಿಟಿಐ ಗೆ ಹೇಳಿದ್ದಾರೆ.

"ನಾವು ಮೊದಲಿಗೆ ವೈಟ್ ಬಾಲ್ ಪ್ಂದ್ಯಗಳನ್ನು ಆಯೋಜಿಸಿದ್ದೇವೆ. ಷಾಡೋ ಟೂರ್' ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸುವ ಸಮಯದಲ್ಲಿ ನಾವು ಭಾರತ ಎ ತಂಡವನ್ನು  ಹಿರಿಯರ ತಂಡದ ಒತ್ತಾಯದ ಮೇರೆಗೆ ನಾವು ಕಳಿಸಿದ್ದೇವೆ. ಮುರಳಿ ವಿಜಯ್ ಹಾಗೂ ಅಜಿಂಕ್ಯ ರೆಹಾನೆ ಈ ’ಎ’ ತಂಡವನ್ನು ಮುನ್ನಡೆಸಿದ್ದಾರೆ. ಹೀಗೆ ಅವರಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಿದ್ದಾಗಲೂ ಉತ್ತಮ ಫಲಿತಾಂಶ ಬರದೆ ಹೋದಲ್ಲಿ ಪ್ರಶ್ನಿಸುವ ಹಕ್ಕು ಮಂಡಳಿಗಿದೆ." ಅವರು ಹೇಳಿದ್ದಾರೆ.

ಒಂದು ವೇಳೆ ಭಾರತ ಈ ಸರಣಿಯನ್ನೂ ಕಳೆದುಕೊಂಡಲ್ಲಿ ಶಾಸ್ತ್ರಿ-ಕೊಹ್ಲಿ ಇಬ್ಬರೂ ತಮ್ಮ ಅಧಿಕಾರ ಪದದಲ್ಲಿ ಮುಂದುವರಿಯುವುದು ಅಸಂಬವ ಎನ್ನಲಾಗುತ್ತಿದೆ. "ಶಾಸ್ತ್ರಿ ಮತ್ತು ಬೆಂಬಲಿತ ಸಿಬ್ಬಂದಿಯ ತಂಡವು ಇದಾಗಲೇ ಆಸ್ಟ್ರೇಲಿಯಾ ( (2014-15ರಲ್ಲಿ 0-2) ದಕ್ಷಿಣ ಆಫ್ರಿಕಾ ((1-2 ಅಂತರದ ಸೋಲು 2017-18). ನಲ್ಲಿ ಪ್ರಮುಖ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ. ಇದೀಗ ಇಂಗ್ಲೆಂಡ್ ನಲ್ಲಿ ಸಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇನ್ನು ನೀವು ಹಿಂದಿನದನ್ನು ನೆನೆದರೆ ಬಿಸಿಸಿಐ ಡಂಕನ್ ಫ್ಲೆಚರ್ ಅವರ ಸಹಾಯಕ ಜೋ ದಾವೆಸ್ (ಬೌಲಿಂಗ್ ತರಬೇತುದಾರ) ಮತ್ತು ಟ್ರೆವರ್ ಪೆನ್ನಿ (ಫೀಲ್ಡಿಂಗ್ ತರಬೇತುದಾರ)  ಅವರನ್ನು ಭಾರತವು ಇಂಗ್ಲೆಂಡ್ ನಲ್ಲಿ 1-3 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಅಧಿಕಾರದಿಂದ ವಜಾಗೊಳಿಸಿತ್ತು. 

ಬ್ಯಾಟಿಂಗ್ ತರಬೇತುದಾರ ಸಂಜಯ್ ಬಂಗಾರ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರ ಸಾಧನೆ ಕೂಡಾ ಮೌಲ್ಯಮಾಪನಗೊಳ್ಳುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಶ್ರೀಧರ್ ಜವಾಬ್ದಾರಿ  ವಹಿಸಿಕೊಂಡ ನಂತರ, ಭಾರತೀಯಸ್ಲಿಪ್ ಫೀಲ್ಡರ್ಸ್ 50 ಕ್ಯಾಚ್ ಗಳನ್ನು ಕೈಬಿತ್ತಿದ್ದಾರೆ.ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಚಾಪೆಲ್ ಸಹ ಈ ತಂತ್ರಗಾರಿಕೆಯನ್ನು ಕುರಿತು ಪ್ರಶ್ನಿಸಿದ್ದಾರೆ. ಇನ್ನು ಬಂಗಾರ್ ವಿಚಾರಕ್ಕೆ ಬಂದರೆ ಠಿಣ ಪ್ರವಾಸಗಳಿಗೆ ಆಟಗಾರರನ್ನು ಸಿದ್ಧಪಡಿಸುವುದು ಅವರ ದೊಡ್ಡ ಸವಾಲು ನಾಲ್ಕು ವರ್ಷಗಳ ನಂತರ, ಸಹ  ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಒದಗಿಸಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ರಾಷ್ಟ್ರೀಯ ತಂಡದ ಮೂವರು ಆಯ್ಕೆದಾರರಲ್ಲಿ ಕನಿಷ್ಟ ಒಬ್ಬರು ಪ್ರವಾಸದ ವೇಳೆ ತಂಡದ ನಿರ್ವಹಣೆ ನಡೆಸುವವರ ಜತೆಯಾಗಿರಬೇಕು ಎಂದು ಸಲಹೆ ನೀಡುತ್ತಾರೆ.

ಆಗಸ್ಟ್ 18 ರಂದು ಪ್ರಾರಂಭವಾಗುವ ವ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಗೆ ಕೊಹ್ಲಿ ಅವರು ಸೂಕ್ತ ಸಮಯ ಹೊಂದಿಲ್ಲವಾದರೆ ಅವರ ಬದಲಿಗೆ ಸೂಕ್ತ ಆಯ್ಕೆ ಮಾಡುವುದು ಅನಿವಾರ್ಯವಾಗಲಿದೆ. ಇಂತಹಾ ಸಮಯದಲ್ಲಿ ಸಾಮಾನ್ಯವಾಗಿ ಅನುಸರಿಸುವಂತೆ ಉಪನಾಯಕನೇ ತಂಡವನ್ನು ಮುನ್ನಡೆಸಬೇಕು. ಆದರೆ ಜಿಂಕ್ಯ ರಹಾನೆ ಸಹ ಉತ್ತಮ ಫಾರ್ಮನಲ್ಲಿ ಇಲ್ಲದೆ ಇದ್ದ ಕಾರಣ ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ನಾಯಕತ್ವ ವಹಿಸುವ ಸಾಧ್ಯತೆ ಗೋಚರಿಸುತ್ತಿದೆ
Posted by: RHN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : BCCI, Cricket, Ravi Shastri, Virat Kohli, ಬಿಸಿಸಿಐ, ಕ್ರಿಕೆಟ್, ರವಿ ಶಾಸ್ತ್ರಿ, ವಿರಾಟ್ ಕೊಹ್ಲಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS