ಸೆಹ್ವಾಗ್ ಅಬ್ಬರದ ಬ್ಯಾಟಿಂಗ್; ಉಪೇಂದ್ರ ವಿರುದ್ಧ ಗೆದ್ದ ಕಿಚ್ಚ ಸುದೀಪ್!

Published: 09 Sep 2018 07:33 PM IST | Updated: 12 Sep 2018 04:28 PM IST
ವೀರೇಂದ್ರ ಸೆಹ್ವಾಗ್
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಗೆಲುವು ಸಾಧಿಸಿದೆ. 

ಕಿಚ್ಚ ಸುದೀಪ್ ತಂಡ ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಹೊಯ್ಸಳ ಈಗಲ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದು ನಿಗದಿತ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 117 ರನ್ ಪೇರಿಸಿತು.ವೀರೇಂದ್ರ ಸೆಹ್ವಾಗ್ 17 ಎಸೆತದಲ್ಲಿ 46 ರನ್ ಸಿಡಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದರು. 

ಕದಂಬ ಲಯನ್ಸ್ ನೀಡಿದ 118 ರನ್ ಗಳ ಗುರಿ ಬೆನ್ನಟ್ಟಿದ ಉಪೇಂದ್ರ ಪಡೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಹೀಗಾಗಿ ನಿಗದಿತ 10 ಓವರ್ ಗಳಲ್ಲಿ ಹೊಯ್ಸಳ ಈಗಲ್ಸ್ ತಂಡ 7 ವಿಕೆಟ್ ನಷ್ಟಕ್ಕೆ 94 ರನ್ ಸಿಡಿಸಿ ಸೋಲು ಕಂಡಿತು. 

ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಫೈನಲ್ ತಲುಪಿದ್ದು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ