Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rebel MLA

ವಿಚಾರಣೆಗೆ ಹಾಜರಾಗದಿದ್ದರೆ ಕಠಿಣ ಕ್ರಮ; ರೆಬೆಲ್ ಶಾಸಕರಿಗೆ ಸ್ಪೀಕರ್ ನೋಟಿಸ್

Central Govt sees the RTI Act as a nuisance & wants to destroy the status: Congress

ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ

Acting assistant secretary of state for the South and Central Asian Affairs Alice Wells

ಮಧ್ಯಸ್ಥಿಕೆ ಅಲ್ಲ, ಸಹಾಯ ಮಾಡಲು ಸಿದ್ದವಿದೆ ಎಂದು ಹೇಳಿದ್ದು: ಅಮೆರಿಕಾ ಸ್ಪಷ್ಟನೆ

ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಟ್ರಂಪ್ ರನ್ನು ಕೇಳಿಲ್ಲ: ದೊಡ್ಣಣ್ಣನಿಗೆ ತಿವಿದ ಭಾರತ

Commonwealth Table Tennis Championships; India complete clean sweep of gold medals

ಐತಿಹಾಸಿಕ ಸಾಧನೆ; ಕಾಮನ್ ವೆಲ್ತ್ ಟೆಬಲ್ ಟೆನಿಸ್ ನಲ್ಲಿ ಎಲ್ಲ ಏಳು ಚಿನ್ನದ ಪದಕ ಗೆದ್ದ ಭಾರತ

Sudeep

ಸೈಲೆಂಟ್ ಆಗಿ ಮುಂದಕ್ಕೆ ಹೋದ 'ಪೈಲ್ವಾನ್'!

Chandrayaan-2 launch: Congress says

ಚಂದ್ರಯಾನ-2 ಯಶಸ್ವಿ ಉಡಾವಣೆ: ನೆಹರು ಸ್ಮರಿಸಲು ಇದು ಸಕಾಲ ಎಂದ ಕಾಂಗ್ರೆಸ್, ಬಿಜೆಪಿ ತಿರುಗೇಟು

Pawan Kumar

ಬಾಲಿವುಡ್ ಅಂಗಳದಲ್ಲಿ 'ಲೂಸಿಯಾ' ಡೈರೆಕ್ಟರ್, ಹಿಂದಿ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್

ಚಂದ್ರಯಾನ 2

ಚಂದ್ರಯಾನ-2: ಕೊನೆಗೂ ಕರಾಮತ್ತು ತೋರಿದ 'ತುಂಟ ಹುಡುಗ' ಜಿಎಸ್ ಎಲ್ ವಿ-ಎಂಕೆ-3 ರಾಕೆಟ್

NASA congratulates ISRO on Chandrayaan-2 launch

ಚಂದ್ರಯಾನ-2:ಇಸ್ರೋ ಯಶಸ್ಸಿನ ಬಗ್ಗೆ ನಾಸಾ ಹೇಳಿದ್ದಿಷ್ಟು!

No GST invoice required if goods taken abroad for exhibition are brought back in 6 months

ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು

Fire broke out at Mumbai

ಮುಂಬೈ: ಎಂಟಿಎನ್‌ಎಲ್‌ ಕಟ್ಟಡದಲ್ಲಿ ಅಗ್ನಿ ಅವಘಡ, 100 ಹೆಚ್ಚು ಜನ ಸಿಲುಕಿರುವ ಸಾಧ್ಯತೆ

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಇಂದು ಅಸಾಧ್ಯ; ಸುಪ್ರೀಂ ಕೋರ್ಟ್

ಮುಖಪುಟ >> ಕ್ರಿಕೆಟ್

4ನೇ ಬಾರಿ ಫೈನಲ್​ ಗೇರುವ ಭಾರತದ ಕನಸು ಭಗ್ನಗೊಳಿಸಿದ ಒಂದೇ ಒಂದು ರನೌಟ್!

ರೋಚಕ ಘಟ್ಟದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಪೆವಿಲಿಯನ್ ಗೆ ಅಟ್ಟಿದ ರನೌಟ್..!
Martin guptill

ಧೋನಿ ರನೌಟ್

ಲಂಡನ್: ಹಾಲಿ ವಿಶ್ವಕಪ್ ನಲ್ಲೂ ಫೈನಲ್ ಪ್ರವೇಶ ಮಾಡುವ ಭಾರತದ ಕನಸಿಗೆ ನ್ಯೂಜಿಲೆಂಡ್ ತಂಡ ತಣ್ಣೀರೆರಚಿದ್ದು, ಇಡೀ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ತಿರುವು ತಂದಿದ್ದು ಒಂದೇ ಒಂದು ರನೌಟ್..

ಹೌದು.. ನ್ಯೂಜಿಲೆಂಡ್ ನೀಡಿದ್ದ 240 ರನ್ ಗಳ ಸಾಮಾನ್ಯ ಗುರಿ ಅಕ್ಷರಸಃ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತ್ತು, ಪ್ರಮುಖವಾಗಿ ಭಾರತ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟ್ ಆಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಬಳಿಕ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 32 ರನ್ ಗಳಿಸಿ ತಂಡಕ್ಕೆ ನೆರವಾದರಾದರೂ, ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಅನಾವಶ್ಯಕ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿದ್ದು, ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಈ ಹಂತದಲ್ಲಿ ಭಾರತ ತಂಡ ಕೇವಲ 92 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಅಕ್ಷರಶಃ ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹೊತ್ತಿನಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಜೋಡಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆರಂಭದಿಂದಲೂ ಜಡೇಜಾ ಸ್ಫೋಟಕ ಆಟಕ್ಕೆ ಮುಂದಾದರೆ, ಧೋನಿ ತಮ್ಮ ಎಂದಿನ ತಾಳ್ಮೆಯ ಆಟಕ್ಕೆ ಅಂಟಿಕೊಂಡಿದ್ದರು. ನೋಡ ನೋಡುತ್ತಲೇ ಈ ಜೋಡಿ ಶತಕದ ಜೊತೆಯಾಟವಾಡಿತು. 

ಜಡೇಜಾ ಅರ್ಧ ಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರೆ ಧೋನಿ 35 ರನ್ ಗಳಿಸಿ ನಿಧಾನವಾಗಿ ಅರ್ಧಶತಕದತ್ತ ನಡೆಯುತ್ತಿದ್ದರು. ಭಾರತದ ಇನ್ನಿಂಗ್ಸ್ ನ 48ನೇ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 15 ಎಸೆತಗಳಲ್ಲಿ 33 ರನ್ ಗಳ ಅವಶ್ಯಕತೆ ಇದ್ದಾಗ ಬೌಲ್ಟ್ ಎಸೆದ 5ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಜಡೇಜಾ ಲೆಕ್ಕಾಚಾರ ತಪ್ಪಾಗಿ ಚೆಂಡು ಬ್ಯಾಟ್ ನ ಅಂಚಿಗೆ ತಾಗಿ ಕೇನ್ ವಿಲಿಯ್ಸಮನ್ ಕೈ ಸೇರಿತ್ತು. ಅದರೊಂದಿಗೆ ನ್ಯೂಜಿಲೆಂಡ್ ಗೆಲುವಿನ ಕನಸು ಚಿಗುರೊಡೆದಿದ್ದು ಮಾತ್ರವಲ್ಲ ಜಡೇಜಾರ ಅದ್ಭುತ ಇನ್ನಿಂಗ್ಸ್ ಗೂ ಕೊನೆ ಬಿತ್ತು.

ಆದರೆ ಪಂದ್ಯದ ಹೈಡ್ರಾಮಾ ಅಷ್ಟಕ್ಕೇ ಅಂತ್ಯವಾಗಿರಲಿಲ್ಲ. ಕ್ರೀಸ್ ನಲ್ಲಿದ್ದ ಧೋನಿ ಮೇಲೆ ಸಂಪೂರ್ಣ ಜವಾಬ್ದಾರಿ ಬಿದ್ದಿತ್ತು. ಅಂತೆಯೇ ಜವಾಬ್ದಾರಿ ಹೊತ್ತ ಧೋನಿ ಕೂಡ ಭಾರಿ ಹೊಡೆತಕ್ಕೆ ಮುಂದಾಗಲು ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲಲು ಮುಂದಾದರು.

ಧೋನಿ ಲೆಕ್ಕಾಚಾರ ತಲೆಕೆಳಗೆ ಮಾಡಿದ ಒಂದೇ ಒಂದು ಅದ್ಭುತ ರನೌಟ್..!
ತಮ್ಮ ಹಳೆಯ ಶೈಲಿಯಲ್ಲಿ ದೊಡ್ಡ ಹೊಡೆತಗಳ ಮೂಲಕ ಭಾರತಕ್ಕೆ ಜಯ ತಂದುಕೊಂಡುವ ಧೋನಿ ಲೆಕ್ಕಾಚಾರ ಆ ಒಂದೇ ಒಂದು ರನೌಟ್ ನಿಂದ ತಲೆಕೆಳಗಾಗಿತ್ತು. 49ನೇ ಓವರ್ ನ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ್ದ ಧೋನಿ ತಂಡಕ್ಕೆ ಗೆಲುವು ತಂದುಕೊಂಡುವ ಮುನ್ಸೂಚನೆ ನೀಡಿದ್ದರು. ಇದೇ ಕಾರಣಕ್ಕೆ ಮತ್ತೊಂದು ಬದಿಯಲ್ಲಿದ್ದ ಭುವಿಗೆ ಕ್ರೀಸ್ ಬಿಟ್ಟುಕೊಟ್ಟಿರಲಿಲ್ಲ. 2 ರನ್ ತೆಗೆಯುವ ಅವಕಾಶವಿದ್ದರೂ, ಒಂಟಿ ರನ್  ಮಾಡಿ ತಾವೇ ಕ್ರೀಸ್ ಕಾಯ್ದುಕೊಂಡಿದ್ದರು. ಫರ್ಗುಸನ್ ಎಸೆದ ಆ ಓವರ್ ನ ಮೂರನೇ ಎಸೆತವನ್ನು ಶಾರ್ಟ್ ಫೈನ್ ಲೆಗ್ ನತ್ತ ಭಾರಿಸಿದ ಧೋನಿ, ಮೊದಲ ರನ್ ಪೂರ್ಣಗೊಳಿಸಿ ಎರಡನೇ ರನ್ ಗಳಿಕೆಗೆ ಮುಂದಾದರು. ಆದರೆ ಅಷ್ಟು ಹೊತ್ತಿಗಾಗಲೇ ಚೆಂಡನ್ನು ಹಿಡಿತಕ್ಕೆ ಪಡೆದಿದ್ದ ಫೀಲ್ಡರ್ ಮಾರ್ಟಿನ್ ಗಪ್ಟಿಲ್ ನೇರವಾಗಿ ಚೆಂಡನ್ನು ವಿಕೆಟ್ ಗೆ ಎಸೆದರು. 

ಕ್ಷಣ ಮಾತ್ರದಲ್ಲಿ ಬೇಲ್ಸ್ ಹಾರಿತ್ತು. ಕ್ರೀಸ್ ನಿಂದ ಕೆಲವೇ ಇಂಚುಗಳಷ್ಟು ದೂರವಿದ್ದ ಧೋನಿ ರೋಚಕ ರನೌಟ್ ಗೆ ಬಲಿಯಾದರು. ವಿಶ್ವದಲ್ಲಿ ತಮ್ಮ ಅದ್ಭುತ ರನ್ನಿಂಗ್ ನಿಂದಾಗಿಯೇ ಖ್ಯಾತಿ ಗಳಿಸಿರುವ ಧೋನಿ ತಮ್ಮ ಕಟ್ಟಕಡೆಯ ವಿಶ್ವಕಪ್ ಟೂರ್ನಿಯನ್ನು ರನೌಟ್ ಗೆ ಬಲಿಯಾಗಿದ್ದರು. ಆ ಒಂದು ರನೌಟ್ ಭಾರತವನ್ನು ವಿಶ್ವಕಪ್ ಫೈನಲ್ ನಿಂದಲೂ ದೂರವಿಡುವಂತೆ ಮಾಡಿತ್ತು. ಬಹುಶಃ ಧೋನಿ ಆ ಸಂದರ್ಭದಲ್ಲಿ ಕ್ರೀಸ್ ನತ್ತ ಜಿಗಿದಿದ್ದರೆ ರನೌಟ್ ನಿಂದ ಪಾರಾಗುವ ಸಾಧ್ಯತೆ ಇತ್ತೇನೋ.. ಆದರೆ ಆ ಒಂದು ರನೌಟ್ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದು ಮಾತ್ರವಲ್ಲ, ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿದ್ದ ಭಾರತವನ್ನು ಟೂರ್ನಿಯಿಂದಲೇ ಹೊರಗಟ್ಟಿತು. ಅಲ್ಲದೆ ಟೂರ್ನಿಯುದ್ದಕ್ಕೂ ವೈಫಲ್ಯ ಅನುಭವಿಸಿದ್ದ ನ್ಯೂಜಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಈ ಒಂದೇ ಒಂದು ಅದ್ಭುತ ರನೌಟ್ ನಿಂದ ನ್ಯೂಜಿಲೆಂಡ್ ಪಾಲಿಗೆ ಹೀರೋ ಆಗಿ ಬಿಟ್ಟಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : London, Cricket Offbeat, ICC World Cup 2019, India, NewZealand, MS Dhoni, Martin guptill, ಲಂಡನ್, ಕ್ರಿಕೆಟ್, ಐಸಿಸಿ ವಿಶ್ವಕಪ್ 2019, ಭಾರತ, ನ್ಯೂಜಿಲೆಂಡ್, ಎಂಎಸ್ ಧೋನಿ, ಮಾರ್ಟಿನ್ ಗಪ್ಟಿಲ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS