ಸರಣಿ ಸೋತರು, ಅವಧಿಗೂ ಮುನ್ನ ಕೋಚ್ ರವಿಶಾಸ್ತ್ರಿಗೆ 3 ತಿಂಗಳ ವೇತನ ಪಾವತಿ!

Published: 11 Sep 2018 08:03 AM IST
ರವಿಶಾಸ್ತ್ರಿ
ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅವಧಿಗೂ ಮುನ್ನವೇ 3 ತಿಂಗಳ ವೇತನ ನೀಡಿದೆ. 

ಬಿಸಿಸಿಐ ರವಿಶಾಸ್ತ್ರಿಗೆ 3 ತಿಂಗಳಿಗೆ ಒಟ್ಟು 2.05 ಕೋಟಿ ರುಪಾಯಿ ವೇತನ ನೀಡಿದೆ. ಬಿಸಿಸಿಐ ನಿನ್ನೆ ಆಟಗಾರರ ಮತ್ತು ಕೋಚ್ ಗಳ ವೇತನ, ನವೀಕರಣ, ಪ್ರಶಸ್ತಿ ಹಾಗೂ ಪಂದ್ಯಗಳ ಸಂಭಾವನೆ ಹಣ ಪಾವತಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿದೆ. 

ವೇಗಿ ಭುವನೇಶ್ವರ್ ಕುಮಾರ್ ಅತೀ ಹೆಚ್ಚು 3.73 ಕೋಟಿ ವೇತನ ಪಡೆದಿದ್ದರೆ, ನಾಯಕ ವಿರಾಟ್ ಕೊಹ್ಲಿ 1.25 ಕೋಟಿ, ರೋಹಿತ್ ಶರ್ಮಾ 1.42 ಕೋಟಿ, ಧವನ್ 2.83 ಕೋಟಿ ಹಾಗೂ ಪೂಜಾರ 2.80 ಕೋಟಿ ವೇತನ ಪಡೆದಿದ್ದಾರೆ. 
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ