ಇಂಗ್ಲೆಂಡ್ ನೆಲದಲ್ಲಿ ಎಂಎಸ್ ಧೋನಿ ಸಹ ಮಾಡಲಾಗದ್ದನ್ನು ಯುವ ಆಟಗಾರ ರಿಷಬ್ ಪಂತ್ ಮಾಡಿದ್ರೂ!

Published: 12 Sep 2018 08:02 PM IST
ಎಂಎಸ್ ಧೋನಿ-ರಿಷಬ್ ಪಂತ್
ಓವೆಲ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು ಆದರೆ ಟೀಂ ಇಂಡಿಯಾದ ಆಟಗಾರರು ತಮ್ಮದೇ ಆದ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಶತಕ ಸಿಡಿಸಿ ಮಿಂಚಿದ್ದರು. ರಿಷಬ್ ಪಂತ್ ರ ಚೊಚ್ಚಲ ಶತಕ ಇದೀಗ ಅನೇಕ ದಾಖಲೆಗಳಿಗೆ ಭಾಜನವಾಗಿದೆ. 

ಇನ್ನು ಟೀಂ ಇಂಡಿಯಾದ ಯಾವೊಬ್ಬ ವಿಕೆಟ್ ಕೀಪರ್ ಸಹ ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿಲ್ಲ. ಇನ್ನು ಹೇಳಬೇಕೆಂದರೆ ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸಹ ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿಲ್ಲ. ಓವೆಲ್ ಮೈದಾನದಲ್ಲಿ ಧೋನಿ 92 ರನ್ ಪೇರಿಸಿದ್ದೆ ಅತಿ ದೊಡ್ಡ ಮೊತ್ತವಾಗಿತ್ತು. 

ಇನ್ನು ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ 3 ಸಿಕ್ಸರ್ ಹಾಗೂ 14 ಬೌಂಡರಿ ಸೇರಿದಂತೆ 114 ರನ್ ಪೇರಿಸಿದ್ದರು. ಇದೇ ವೇಳೆ ರಿಷಬ್ ಪಂತ್ ಸಿಕ್ಸರ್ ಸಿಡಿಸಿ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ