ಕೆಸಿಸಿ ಕಪ್: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸೆಹ್ವಾಗ್ ಕಾಲಿಗೆರಗಿದ ಅಭಿಮಾನಿ, ವಿಡಿಯೋ ವೈರಲ್!

Published: 12 Sep 2018 02:55 PM IST | Updated: 12 Sep 2018 03:07 PM IST
ವೀರೇಂದ್ರ ಸೆಹ್ವಾಗ್
ಬೆಂಗಳೂರು: ತಮ್ಮ ನೆಚ್ಚಿನ ಆಟಗಾರರನ್ನು ಕಂಡಾಗ ಅವರನ್ನು ಅಪ್ಪಿಕೊಳ್ಳುವುದು ಅಥವಾ ಕಾಲಿಗೆರಗುವುದು ಸಾಮಾನ್ಯ. ಅಂತೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಕಾಲಿಗೆರಗಿದ್ದಾನೆ. 

ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್ ಕೆಸಿಸಿಯಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ಈ ವೇಳೆ ಮೈದಾನದಲ್ಲಿ ಅವರ ಆಟ ಕಂಡು ಬೆರಗಾದ ಅಭಿಮಾನಿಯೊಬ್ಬ ಮೈದಾನದಲ್ಲೇ ಸೆಹ್ವಾಗ್ ರನ್ನು ಅಪ್ಪಿ, ಕಾಲಿಗೆರಗಿದ್ದಾನೆ ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್ ಕಿಚ್ಚ ಸುದೀಪ್ ನಾಯಕತ್ವದ ಕದಂಬ ಲೈಯನ್ಸ್ ತಂಡದಲ್ಲಿ ಬ್ಯಾಟ್ ಬೀಸಿದ್ದರು. 

ಟೂರ್ನಿಯ ಫೈನಲ್ ಪಂದ್ಯದಲ್ಲಿ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ 6 ವಿಕೆಟ್ ಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
Posted by: VS | Source: Online Desk

ಈ ವಿಭಾಗದ ಇತರ ಸುದ್ದಿ