ಭಾರತದ ರೈತನನ್ನು ಅಳವಿನಂಚಿಗೆ ದೂಡಿದ ಜಾಗತೀಕರಣ; ಚಂದ್ರಶೇಖರ್ ಕಂಬಾರ

ರೈತ ಭಾರತವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿ ಇಂದು ನಮಗೆ ನಿರ್ಮಾಣವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ....

Published: 31st August 2015 02:00 AM  |   Last Updated: 31st August 2015 11:44 AM   |  A+A-


Chandrashekhar Kambar

ಚಂದ್ರ ಶೇಖರ್ ಕಂಬಾರ

Posted By : Shilpa D
Source : Online Desk
ಬೆಂಗಳೂರು: ರೈತ ಭಾರತವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿ ಇಂದು ನಮಗೆ ನಿರ್ಮಾಣವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು. ಅನಿಕೇತನ ಕನ್ನಡ ಬಳಗ ಹಾಗೂ ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂಬಾರ ಅವರ `ಶಿವನ ಡಂಗುರ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇಂದು ರೈತನೇ ಭೂಮಿ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ವ್ಯವಸ್ಥೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಜಾಗತೀಕರಣದ ಹಿಂದೆ ಬಿದ್ದು ದೇಶ ಎಲ್ಲವನ್ನೂ ಕಳೆದುಕೊಳ್ಳುವ ದಿನ ಬರಲಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಇಂಗ್ಲಿಷ್ ಮಯವಾಗಿದೆ. ಜಾಗತೀಕರಣದ ಭಾರತ ಎಲ್ಲವನ್ನು ಕಳೆದುಕೊಂಡು ರೈತ ಭಾರತವನ್ನೂ ಅಳಿವಿನ ಅಂಚಿಗೆ ತಳ್ಳುತ್ತಿದೆ. ವಿಪರ್ಯಾಸವೆಂದರೆ ಇಂದು ರೈತರೇ ತಮ್ಮ ಭೂಮಿಗೆ ಬೆಲೆ ಕಟ್ಟುತ್ತಿದ್ದಾರೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ರೈತ ಭಾರತ ಜಾಗತೀಕರಣದ ವಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಕವಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ಶೋಷಣೆರಹಿತ, ವರ್ಗರಹಿತ ಸಮಾಜ ಕಟ್ಟುವ ಪರಿಕಲ್ಪನೆ ಕಂಬಾರ ಅವರಿಗಿದೆ. ಅವರ ಆ ಚಿಂತನೆ ಭಾರತ ಮಾತ್ರವಲ್ಲ ಪ್ರಪಂಚಕ್ಕೇ ಅನ್ವಯವಾಗುತ್ತದೆ. ದೇಶೀ ಚಿಂತಕರ ಮುಂಚೂಣಿಯಲ್ಲಿ ಕಂಬಾರರು ಇದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ ಎಂದರು. ಕಂಬಾರ, ಪೌರಾಣಿಕ, ಜಾಗತಿಕ ಶಿವಪುರ ಕಂಡಿದ್ದಾರೆ. ಅವರ ಬದಲಾದ ಶಿವಪು ರದಲ್ಲಿ ದೇವತೆಗಳು ಚುನಾವಣೆಗಳ ಬಗ್ಗೆ ಚರ್ಚಿಸು ತ್ತಾರೆ. ಅಲ್ಲಿ ದಲಿತ ಚಳವಳಿ, ರೈತ ಚಳ ವಳಿ ಪ್ರವೇಶ ಮಾಡಿವೆ. ಜಾಗತೀಕರಣದ ದುಷ್ಪರಿ ಣಾಮವನ್ನು ಈ ಕೃತಿ ಮೂಲಕ ಬಿಚ್ಚಿಟ್ಟಿದ್ದಾರೆ ಎಂದರು.

ವಿಮರ್ಶಕ ಡಾ. ನರಹಳ್ಳಿ ಬಾಲ ಸುಬ್ರಮಣ್ಯ ಮಾತನಾಡಿ, ನಾಡಿನ ಪ್ರಮುಖ ಕಾದಂಬರಿರಕಾರರಲ್ಲಿ ಕಂಬಾರರು ಒಬ್ಬರು. ಆಧುನಿಕ ಲೇಖಕರನ್ನು ಗಮನಿಸಿದಾಗ ಹೆಚ್ಚು ರಾಜಕೀಯ ಪ್ರಜ್ಞೆ ಒಳಗೊಂಡ ಲೇಖಕ, ಆದರೆ ಅವರ ಕಾದಂಬರಿಗಳು ಹೆಚ್ಚು ವಿಮರ್ಶೆಗೊಳಪಟ್ಟಿಲ್ಲ ಎಂದು ಅಭಿಪ್ರಾಯಪಟ್ಟರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಮಾಯಣ್ಣ ಎಂ.ತಿಮ್ಮಯ್ಯ, ಪ್ರಕಾಶ್ ಕಂಬತ್ತಳ್ಳಿ ಮತ್ತಿತರರು ಇದ್ದರು.

ಇಂದು ರೈತನೇ ಭೂಮಿ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ವ್ಯವಸ್ಥೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ.

ಇಂದು ರೈತರೇ ತಮ್ಮ ಭೂಮಿಗೆ ಬೆಲೆ ಕಟ್ಟುತ್ತಿದ್ದಾರೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ.Stay up to date on all the latest ಜಿಲ್ಲಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp