ಬೋಗಸ್ ಕಾರ್ಡ್ ಮಾಫಿಯಾಗೆ ಬ್ರೇಕ್ ಕಷ್ಟದ ಕೆಲಸ: ಗುಂಡೂರಾವ್

ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳು ಚಲಾವಣೆಯಲ್ಲಿರುವುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳು ಚಲಾವಣೆಯಲ್ಲಿರುವುದನ್ನು ಒಪ್ಪಿಕೊಂಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ಈ ಮಾಫಿಯಾವನ್ನು ನಿಯಂತ್ರಣಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಬೋಗಸ್ ರೇಷನ್ ಕಾರ್ಡ್ ಮಾಫಿಯಾ ಹಾಗೂ ಅನ್ನ-ಭಾಗ್ಯಕ್ಕೆ ಕನ್ನ ಹಾಕುವ ಗೋದಾಮು ಮಾಫಿಯಾದ ಕರಾಳ ಮುಖಗಳನ್ನು ಖಾಸಗಿ ಚಾನಲ್ ತಂಡ ರಹಸ್ಯ ಕಾರ್ಯಾಚರಣೆ ಮಾಡಿ ಬಯಲು ಮಾಡಿತ್ತು. ಈ ಮಾಫಿಯಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿರು-ವುದನ್ನು ದಾಖಲೆ ಸಮೇತ ಸಾಬೀತುಪಡಿಸಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ರಾಜ್ಯಾದ್ಯಂತ ತಲ್ಲಣವುಂಟು ಮಾಡಿತ್ತು. ಅಲ್ಲದೆ ಪ್ರತಿಪಕ್ಷ ನಾಯಕರು ಈ ಹಗರಣದ ತನಿಖೆ ಒತ್ತಾಯ ಮಾಡಿದ್ದರು.

ಹಗರಣದ ಬಗ್ಗೆ ಯಾವ ಪ್ರತಿಕ್ರಿಯೇ ನೀಡದೆ ಮೌನಕ್ಕೆ ಶರಣಾಗಿದ್ದ ಸಚಿವರು ಸೋಮವಾರ ಮೌನಮುರಿದಿದ್ದಾರೆ. ತಮ್ಮ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಇದರಿಂದ ಬೋಗಸ್ ಕಾರ್ಡ್ ಮಾಫಿಯಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬೋಗಸ್ ಕಾರ್ಡ್‍ಗಳಿರುವುದರಿಂದಲೇ ಗೋದಾಮುಗಳಲ್ಲಿ ಪಡಿತರ ಪದಾರ್ಥ ಕಾಳ ಸಂತೆ
ಸೇರುತ್ತಿದೆ ಅನ್ನುವುದು ಸತ್ಯ. ತಾವು ಈಗಾಗಲೇ 11 ಸಾವಿರ ಬೋಗಸ್ ಕಾರ್ಡಗಳನ್ನು ರದ್ದು ಮಾಡಿದ್ದು, ಪ್ರತಿ ನಿತ್ಯ ಮೂರು ಸಾವಿರಕ್ಕೂ ಹೆಚ್ಚು ಕಾರ್ಡ್‍ಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದರು. ಅಧಿಕಾರಗಳ ಅಮಾನತು: ಇನ್ನು ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ದಾವಣಗೆರೆ ಹಾಗೂ ಹರಿಹರ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾ ಮಿನ ಭ್ರಷ್ಟ ಅಧಿಕಾರಿಗಳಾದ ರಮೇಶ್ ಹಾಗೂ ಮಹೇಶ ಎಂಬ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com