ಮಂಗಳಮುಖಿಯರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ

Published: 13th August 2013 02:00 AM  |   Last Updated: 13th August 2013 12:00 PM   |  A+A-


Posted By : Rashmi
ಕ.ಪ್ರ.ವಾರ್ತೆ     ಚಾ.ನಗರ     ಆ.12
ಮಂಗಳಮುಖಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಸರ್ಕಾರ ಹಾಗೂ ಸಂಘಸಂಸ್ಥೆಗಳು ನೀಡುವ ಸವಲತ್ತು ಪಡೆದು ಪ್ರಗತಿ ಹೊಂದಬೇಕು ಎಂದು ನಗರದ ಲಯನ್ಸ್ ಕ್ಲಬ್ ಆಫ್ ಗ್ರಾನೈಟ್ ಸಿಟಿ  ಕಾರ್ಯದರ್ಶಿ ಎಲ್.ಸುರೇಶ್ ಹೇಳಿದರು.
ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಐಡಿಪಿಎಂಎಸ್ ಸಂಸ್ಥೆಯಲ್ಲಿ ನಡೆದ ಸಮತ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಕೃತಿಯ ನಿಯಮದಂತೆ ತಾವು ಮಂಗಳಮುಖಿಯರಾಗಿದ್ದೀರಿ. ಇದಕ್ಕಾಗಿ ಕೀಳರಿಮೆ ಬೇಡ. ತಮ್ಮಲ್ಲೂ ಅಗಾಧ ಪ್ರತಿಭೆ ಇದೆ. ಅದನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದರು.
ನಮ್ಮ ನಗರದಲ್ಲಿ ಹುಟ್ಟಿದ ಕುಮಾರಿ ಉತ್ತಮ ನೃತ್ಯಪಟುವಾಗಿದ್ದಾರೆ. ನಟ ಶಿವರಾಜ್ಕುಮಾರ್ ಅವರೊಂದಿಗೆ ಡ್ಯಾನ್ಸ್ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅವರ ಸಾಧನೆ ನೋಡಿದ ಪ್ರತಿಯೊಬ್ಬರು ಇವಳು ನಮ್ಮ ಊರಿನ ಕುಮಾರಿ ಎನ್ನುತ್ತಾರೆ. ಇಂಥ ಪ್ರತಿಭೆ ನಿಮ್ಮಲ್ಲಿ ಇದೆ ಎಂದರು.
ಸರ್ಕಾರ ವಯೋವೃದ್ಧರು, ವಿಧವೆಯರು, ಮದುವೆಯಾಗದವರು, ವಿಚ್ಛೇದಿತ ಮಹಿಳೆಯರು ಹಾಗೂ ಅಂಗವಿಕಲರಿಗೆ ಮಾಶಾಸನ ನೀಡುತ್ತಿದೆ. ಮಂಗಳಮುಖಿಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಜಾಗೃತರಾಗಿ, ಸಂಘಟನೆಗೊಂಡು ಸರ್ಕಾರ ನಮಗೂ ಸಹಾಯಧನ ನೀಡಬೇಕು ಎಂಬ ಒತ್ತಾಯ ಹೇರಬೇಕು. ಶಿಕ್ಷಣ ಪಡೆದು ಸ್ವಾವಲಂಬನೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬಾಂಬೆ, ಕಲ್ಕತ್ತ ಹಾಗೂ ಮುದ್ರಾಸ್ನಂಥ ಮಹಾನಗರಗಳಲ್ಲಿ ಮಂಗಳಾಮುಖಿಯರು ಸಂಘಟಿತರಾಗಿ ತಮ್ಮ ಪ್ರಭುತ್ವ ಸಾಧಿಸಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದಾರೆ. ಎಲ್ಲ ವರ್ಗದ ಜನರಲ್ಲಿರುವಂತೆ ತಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುತ್ತದೆ. ಅದನ್ನು ತಾವುಗಳೇ ಒಂದೆಡೆ ಕಲೆತು ಪರಿಹರಿಸಿಕೊಳ್ಳಬೇಕು. ಒಬ್ಬರಿಗೊಬ್ಬರು ಸಹಕಾರದಿಂದ ನಡೆದರೆ ಸಲವತ್ತುಗಳನ್ನು ಪಡೆದು ಸಮಾಜದಲ್ಲಿ ನೆಮ್ಮದಿಯಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಮತ ಸೊಸೈಟಿಯ ನರೇಶ್ನಾಯಕ್ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಮಿಕರು, ಎಚ್ಐವಿ ಸೋಂಕಿತರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಗೊಳಿಸುವುದು. ಮಹಿಳೆಯರು, ದಲಿತರು, ಆದಿವಾಸಿಗಳು, ಬಡಜನರು, ಅಂಗವಿಕಲರು, ಧಾರ್ಮಿಕ ಅಲ್ಪಸಂಖ್ಯಾತ ಕುಟುಂಬಗಳಿಗೆ ಪೌಷ್ಟಿಕ ಆಹಾರ, ಆರೋಗ್ಯ, ವಿದ್ಯಾಭ್ಯಾಸ, ವಸತಿ ಮತ್ತು ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಮತ ಸೊಸೈಟಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳ ಜೊತೆಗೂಡಿ ತಮ್ಮ ಬೆಳವಣಿಗೆಗೆ ನಮ್ಮ ಸಂಸ್ಥೆ ದುಡಿಯುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿವಲೀಲಾ, ಚೈತನ್ಯ ನೆಟ್ವರ್ಕ್ ಸುಧಾ, ವಿವಿಧ ಸಂಸ್ಥೆಯ ಚಂದ್ರಶೇಖರ್ ಪಾಟೀಲ್, ಗಂಗಾಧರ್, ಜಿಲ್ಲಾ ಸಂಯೋಜಕ ಉಮರ್, ಅನುಷ್ಕಾ, ಮಂಗಳಾಮುಖಿಯರಾದ ಕುಮಾರಿ, ಶ್ರಮಿಕ ಇತರರು ಇದ್ದರು.


Stay up to date on all the latest ಚಾಮರಾಜನಗರ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp