ಪಂ. ಪುಟ್ಟರಾಜ ಗವಾಯಿ 3ನೇ ಪುಣ್ಯಸ್ಮರಣೆ

Published: 17th September 2013 02:00 AM  |   Last Updated: 17th September 2013 11:43 AM   |  A+A-


Posted By : Lingaraj
ಧಾರವಾಡ: ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳು ಇಡೀ ಜಗತ್ತಿಗೆ ಸಂಗೀತವನ್ನು ಪರಿಚಯಿಸಿ ಉನ್ನತ ಸ್ಥಿತಿಗೇರಿಸಿದ ಹಿರಿಮೆ ಅವರದ್ದಾಗಿದೆ ಎಂದು ಸಾಹಿತಿ ಮೋಹನ ನಾಗಮ್ಮನವರ ಹೇಳಿದರು.
ಇಲ್ಲಿನ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಲಯನ್ಸ್ ಕ್ಲಬ್ ಜಂಟಿಯಾಗಿ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳ 3ನೇ ಪುಣ್ಯಸ್ಮರಣೆ ಹಾಗೂ ಎಂಜಿನಿಯರ್ಸ್ ದಿನಾಚರಣೆ ಅಂಗವಾಗಿ ನಡೆದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಟ್ಟರಾಜ ಗವಾಯಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಗವಾಯಿ ಅವರು ರಚಿಸಿದ ಎಲ್ಲ ಸಾಹಿತ್ಯದ ಪ್ರಕಾರಗಳನ್ನು ಮರುಮುದ್ರಣ ಮಾಡುವ ಕಾರ್ಯ ನಡೆಯಬೇಕಿದೆ ಎಂದರು.
ಎಸ್.ಬಿ. ಹೆರೂರ ಮಾತನಾಡಿ, ಗಾನಯೋಗಿ ಪುಟ್ಟರಾಜ ಗವಾಯಿ ಅವರ ಪ್ರತಿಯೊಂದು ಆಲೋಚನೆಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸಿದರೆ, ಕಲ್ಮಶ ವಾತಾವರಣ ನಿರ್ನಾಮವಾಗುತ್ತದೆ ಎಂದರು.
ರಂಗ ನಿರ್ದೇಶಕ ಕೆ. ಜಗುಚಂದ್ರ, ಶಿಕ್ಷಕರಾದ ಚಂದ್ರಾದೇವಿ ಸದಾನಂದಸ್ವಾಮಿ, ವಿಠ್ಠಲ ಜಾಧವ, ಅಫ್ರಜಾ ಕಾಠೆವಾಡಿ, ಎಸ್.ಎಸ್. ಪಾಟೀಲ, ವಿ. ಹೊಸಮನಿ, ವಿಜಯಲಕ್ಷ್ಮಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಾಜಿ ಚವ್ಹಾಣ ಮಾತನಾಡಿದರು, ಕೆ.ಎಚ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಸ್. ಫರಾಸ್, ಎಸ್.ಎಂ. ಹೂಗಾರ, ಶ್ರೀಶೈಲ ಚಿಕ್ಕನಳ್ಳಿ, ನಾಗರಾಜ ಇಟಗಿ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಸುರೇಶ ಬೇಟಗೇರಿ ಸ್ವಾಗತಿಸಿದರು. ಎಫ್.ಬಿ. ಕಣವಿ ವಂದಿಸಿದರು. ನಂತರ ಸಂಗೀತಗಾರ್ತಿ ಗಾಯತ್ರಿ ದೇಶಪಾಂಡೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಎಚ್. ಕುಲಕರ್ಣಿ ಹಾರ್ಮೋನಿಯಂ, ಶ್ರೀವತ್ಸ ತಬಲಾ ಸಾಥ್ ನೀಡಿದರು.

Stay up to date on all the latest ಧಾರವಾಡ news with The Kannadaprabha App. Download now
facebook twitter whatsapp