ಡಾ.ಜಿ. ರಾಮಕೃಷ್ಣರಿಗೆ ಡಾ.ಎಲ್.ಬಿ ಪ್ರಶಸ್ತಿ

Published: 19th March 2014 02:00 AM  |   Last Updated: 19th March 2014 12:17 PM   |  A+A-


Posted By : Mainashree
ಕೋಲಾರ: ಭೌತವಾದಿ ಸಂತ ಹಾಗೂ ಲೇಖಕ ಡಾ.ಜಿ. ರಾಮಕೃಷ್ಣ ಅವರು ಯಾವುದೇ ಪ್ರಶಸ್ತಿಗೆ ಒಪ್ಪದವರು. ಡಾ.ಎಲ್. ಬಸವರಾಜು ಪ್ರಶಸ್ತಿ ಸ್ವೀಕರಿಸಲು ಸಮ್ಮತಿಸಿರುವುದು ಸಂತಸದ ವಿಚಾರವಾಗಿದ್ದು, ಮಾ.22 ರಂದು ಶನಿವಾರ ಕೋಲಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನ ಪ್ರತಿನಿದಿ, ಸಾಹಿತಿ ಲಕ್ಷ್ಮೀಪತಿ ಕೋಲಾರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಜಿ. ರಾಮಕೃಷ್ಣ ಅವರಿಗೆ ಪ್ರಸಿದ್ಧ ಲೇಖಕ, ಪತ್ರಕರ್ತ ಕಾಮರೂಪಿ ಪ್ರಶಸ್ತಿ ಪ್ರದಾನ ಮಾಡುವರೆಂದು ಹೇಳಿದರು. ಹತ್ತು ಸಾವಿರ ರು. ನಗದು, ಪ್ರಶಸ್ತಿ ಪತ್ರದೊಂದಿಗೆ ಜಿ. ರಾಮಕೃಷ್ಣರನ್ನು ಪುರಸ್ಕರಿಸಿ ಗೌರವಿಸಲಾಗುವುದು, ನಗರದ ಪತ್ರಕರ್ತರ ಭವನದಲ್ಲಿ ಅಂದು ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೂ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ.ಜಿ. ರಾಮಕೃಷ್ಣ ಬದುಕು ಮತ್ತು ಬರಹ ವಿಚಾರ ಸಂಕಿರಣ ನಡೆಯಲಿದೆ. ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರಿಂದ ಅಭಿನಂದನಾ ಭಾಷಣ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಶಾಲಾಕ್ಷಿ ಬಸವರಾಜು ಭಾಗವಹಿಸಲಿದ್‌ಕಾರೆ.

Stay up to date on all the latest ಕೋಲಾರ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp