ಜಾನಪದ ಗೀತಗಾಯನ ಕಾರ್ಯಕ್ರಮ

Published: 19th February 2014 02:00 AM  |   Last Updated: 19th February 2014 01:40 AM   |  A+A-


Posted By : Rashmi
ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಕೃಷ್ಣಮೂರ್ತಿ ಉದ್ಘಾಟನೆಯನ್ನು ನೆರವೇರಿಸಿದರು. ಪ್ರಾಂಶುಪಾಲ ಚೂಡಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಜಾನಪದ ಲೋಕದ ಕಲಾವಿದರಾದ ಚನ್ನಪಟ್ಟಣದ ಮಲ್ಲಯ್ಯ ಮತ್ತು ಲಿಂಗರಾಜು ತಂಡದವರು ಜಾನಪದ ಕಾವ್ಯಗಳಾದ ಮಂಟೇಸ್ವಾಮಿ ಕಥೆ, ಮಲೆಮಹದೇಶ್ವರ ಕಾವ್ಯ ಮೊದಲಾದವುಗಳ ಆಯ್ದ ಭಾಗಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಜಾನಪದ ಕಾವ್ಯಗಳ ಸೊಗಡನ್ನು ಪರಿಚಯಿಸಿದರು. ಪ್ರಾಂಶುಪಾಲ ಚೂಡಲಿಂಗಯ್ಯ ಮಾತನಾಡಿ ಜಾನಪದ ಕಲೆಗಳು ಅಳಿವಿನತ್ತ ಸರಿಯುತ್ತಿವೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜಾನಪದ ಕಲೆ ಉಸಿರಾಡುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಕಲಿಯಲು ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.

Stay up to date on all the latest ತುಮಕೂರು news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp