Kannadaprabha The New Indian Express
777 ಚಾರ್ಲಿ' ಚಿತ್ರಕ್ಕೆ ಬದಲಾದ ನಾಯಕ: ಅರವಿಂದ್ ಆಯ್ಯರ್ ಬದಲು ರಕ್ಷಿತ್ ಶೆಟ್ಟಿ! 
By select 
19 Feb 2018 02:00:00 AM IST

ಬೆಂಗಳೂರು: ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ನ ಪರಮಾವ್ ಸ್ಟುಡಿಯೋ ನಿರ್ಮಿಸುತ್ತಿರುವ 777 ಚಾರ್ಲಿ' ಚಿತ್ರವನ್ನು ಕಿರಣರಾಜ್ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ರಕ್ಷಿತ್ ಶೆಟ್ಟಿ ಇದೇ ಸಿನಿಮಾದಲ್ಲಿ ನಾಯಕನಾಗಿಯೂ ಕೂಡ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ಅರವಿಂದ್ ಅಯ್ಯರ್ ನಾಯಕರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಚಿತ್ರದ ನಾಯಕ ಬದಲಾಗಿದ್ದು, ಅವರ ಬದಲು ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 777 ಚಾರ್ಲಿ' ಚಿತ್ರಕ್ಕೆ ಈ ಮೊದಲು ಅರವಿಂದ್ ಅಯ್ಯರ್ ನಾಯಕರಾಗಿ ಆಯ್ಕೆಯಾಗಿದ್ದರು. ಆ ಚಿತ್ರದ ಫೋಟೋ ಶೂಟ್ ಕೂಡ ಆಗಿತ್ತು. ಈಗ ಅರವಿಂದ್ ಬದಲಾಗಿದ್ದು, ಅವರ ಬದಲು ರಕ್ಷಿತ್ ಶೆಟ್ಟಿ ನಾಯಕನಾಗಿ ಅಭಿನಯಿಸಲಿದ್ದಾರೆ.  ಅರವಿಂದ್ ಅವರ ಡೇಟ್ಸ್ ಸಮಸ್ಯೆಯಿಂದಾಗಿ ನಾಯಕನನ್ನು ಬದಲಾಯಿಸಲಾಯಿತು ಎಂದು ಹೇಳಲಾಗಿದೆ.

ರಕ್ಷಿತ್ ಶೆಟ್ಟಿ ಜೊತೆ ರಿಕ್ಕಿ ಮತ್ತು ಕಿರಿಕ್ ಪಾರ್ಟಿಯಲ್ಲಿ ನಾನು ಕೆಲಸ ಮಾಡಿದ್ದೇನೆ, ರಕ್ಷಿತ್ ಗಾಗಿ ನಿರ್ದೇಶನ ಮಾಡುವುದು ನನ್ನ ಕನಸಾಗಿತ್ತು, ಈಗ ಅನಿರೀಕ್ಷಿತವಾಗಿ ಅವಕಾಶ ಒದಗಿ ಬಂದಿದೆ ಎಂದು ನಿರ್ದೇಶಕ ಕಿರಣ್ ರಾಜ್ ತಿಳಿಸಿದ್ದಾರೆ, 

ರಕ್ಷಿತ್ ಶೆಟ್ಟಿ ಈಗಾಗಲೇ ಅವನೇ ಶ್ರೀಮಾನ್ ನಾರಾಯಣ ಎಂಬ ಮೆಗಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, ಚಾರ್ಲಿಗೂ ಡೇಟ್ ಹೊಂದಿಸಲಿದ್ದಾರೆ. ಮಾರ್ಚ್ 1 ರಿಂದ ಚಿತ್ರೀಕರಣ ಆರಂಭವಾಗಲಿದೆ, 

ಇದೊಂದು ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ ಅಂತೆ. ಬೇಸರದಲ್ಲಿರುವ ನಾಯಕನಿಗೆ ಬೀದಿ ನಾಯಿಯೊಂದು ಸಿಗುತ್ತದೆ. ಅದು ಅವನ ಲೈಫ್‍ಗೆ ಎಂಟ್ರಿಕೊಟ್ಟ ತಕ್ಷಣ ಆತ ಹೇಗೆ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಚಿತ್ರಕ್ಕೆ ನಾಬಿನ್ ಸಂಗೀತ, ಅರುಣ್ ಕಶ್ಯಪ್ ಛಾಯಾಗ್ರಹಣವಿದೆ.

Copyright � 2012 Kannadaprabha.com