Kannadaprabha The New Indian Express
ಪತಿಯೊಂದಿಗೆ ರಾಂಪ್ ಮೇಲೆ ವಾಕ್ ಮಾಡಿದ ಗರ್ಭೀಣಿ ನಟಿ ನೇಹಾ ದುಪಿಯಾ ! 
By select 
25 Aug 2018 12:00:00 AM IST

ಮುಂಬೈ : ಇಲ್ಲಿ ನಡೆಯುತ್ತಿರುವ 'ಲ್ಯಾಕ್ಮಿ ಫ್ಯಾಷನ್ ವೀಕ್'  ಶೋನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ನೇಹಾ ಧುಪಿಯಾ ತನ್ನ ಪತಿ ಅಂಗಾದ್  ಬೇಡಿಯೊಂದಿಗೆ ರಾಂಪ್ ಮೇಲೆ ವಾಕ್ ಮಾಡಿ  ಮಿಂಚಿದ್ದಾರೆ.

ದಿ ಶೋಸ್ಟಾಪಿಂಗ್ ವಧು" ಎಂಬ ಶೀರ್ಷಿಕೆಯ ಸಿಂಘಾಲ್ ಪ್ರದರ್ಶನಕ್ಕಾಗಿ  ಆಕೆಯ ಪತಿ ಅಂಗಾದೊಂದಿಗೆ ರಾಂಪ್ ಮೇಲೆ ನೇಹಾ ಧುಪಿಯಾ ಹೆಜ್ಜೆ ಹಾಕಿದರು.

 ಇದೊಂದು ಅವಿಸ್ಮರಣೀಯ ಘಟನೆ ಎಂದು ನೇಹಾ ಹೇಳಿಕೊಂಡಿದ್ದಾರೆ.  ಇದೊಂದು ಅದ್ಬುತವಾದದ್ದು, ಇಂತಹ ಸಂದರ್ಭದಲ್ಲಿ ಯಾರೂ ಕೂಡಾ ಕೆಲಸ ಮಾಡುವುದಿಲ್ಲ, ವಿರಾಮ ಪಡೆದುಕೊಳ್ಳುತ್ತಾರೆ. ಆದರೆ. ಅದು ಸರಿಯಲ್ಲ ಎಂದು ನೇಹಾ ಹೇಳಿದ್ದಾರೆ.

 ಕೆಲಸದಲ್ಲಿ ನನ್ನಗೆ ನಂಬಿಕೆ ಇದ್ದು, ನಿಮ್ಮೆಲ್ಲರ ಪ್ರೀತಿಯಿಂದ ಇಲ್ಲಿಗೆ ಬಂದು ನೀವು ಪ್ರೀತಿಸುವಂತಹ ಉಡುಪು ಧರಿಸಿ ಪ್ರದರ್ಶನ ನೀಡಿದ್ದೇನೆ ಎಂದು ಲೆಹೆನ್ಗಾ ಮತ್ತು ಚೋಲಿಗಳಿಂದ ಕಂಗೊಳಿಸಿದ ನೇಹಾ ಹೇಳಿದರು.

 ಶೇರ್ವಾನಿಯಲ್ಲಿ ಮಿಂಚುತ್ತಿದ್ದ ಅಂಗಾದ್ ಬೇಡಿ  ಉತ್ತಮ ತಂದೆಯಂತೆ ಅದ್ಬುತವಾದಂತಹ ಪ್ರದರ್ಶನ ನೀಡಿದರು ಎಂದು ನೇಹಾ ಮೆಚ್ಚುಗೆಯ ಮಾತುಗಳನ್ನಾಡಿದರು.

15 ವರ್ಷಗಳ ಹಿಂದೆ ನೇಹಾ ಜೊತೆ ರಾಂಪ್ ಮೇಲೆ ಹೆಜ್ಜೆ ಹಾಕಿದೆ. ಇದೇ ಮೊದಲ ಬಾರಿಗೆ  ಆಕೆಯ ಜೊತೆಗೆ ರಾಂಪ್ ಮೇಲೆ ಹೆಜ್ಜೆ ಹಾಕಿರುವುದಾಗಿ ಮಾಜಿ ಕ್ರಿಕೆಟ್ ಆಟಗಾರ ಬಿಶಾನ್ ಸಿಂಗ್ ಬೇಡಿ ಪುತ್ರ ಅಂಗಾದ್  ಬೇಡಿ ಹೇಳಿದರು.

Copyright � 2012 Kannadaprabha.com