Kannadaprabha The New Indian Express
ಸೈಫ್ ಅಲಿ ಖಾನ್ 'ಹಂಟರ್' ಲುಕ್: ಫೋಟೋ ವೈರಲ್ 
By select 
28 Aug 2018 12:00:00 AM IST

ನವದೆಹಲಿ: ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ, ಹಂಟರ್ ಚಿತ್ರದ ಈ ಹೊಸ ಗೆಟಪ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸೈಫ್ ಅಲಿ ಖಾನ್ ಅವರು ಹಂಟರ್ ಚಿತ್ರಕ್ಕಾಗಿ ತಯಾರಿ ನಡೆಸಿದ್ದು, ಚಿತ್ರದ ಪತ್ರಕ್ಕಾಗಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನವದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. 

ಈ ಹಿಂದೆಂದೂ ಸೈಫ್ ಅವರು ಈ ಮಟ್ಟಕ್ಕೆ ಗಡ್ಡ ಬಿಟ್ಟಿದ್ದನ್ನು ಅಭಿಮಾನಿಗಳು ನೋಡಿರಲಿಲ್ಲ. ಚಿತ್ರೀಕರಣ ಹಿನ್ನಲೆಯಲ್ಲಿ ಉದ್ದನೆಯ ಗಡ್ಡದೊಂದಿಗೆ ಸೈಫ್ ಅವರು ಪೈರೇಟ್ಸ್ ರೀತಿ ತಯಾರಾಗಿದ್ದು, ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Copyright � 2012 Kannadaprabha.com