Kannadaprabha The New Indian Express
ಸೌದಿ ಅರಬೀಯಾದಲ್ಲಿ ಬಿಡುಗಡೆಯುವ ಮೊದಲ ಬಾಲಿವುಡ್ ಚಿತ್ರ 'ಗೋಲ್ಡ್ ' 
By select 
31 Aug 2018 12:00:00 AM IST

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್'  ಚಿತ್ರ ಸೌದಿ ಅರಬಿಯಾದಲ್ಲಿ ಬಿಡುಗಡೆಯಾಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾದ ನಂತರ ರೀಮಾ ಕಾಗ್ಟಿ ನಿರ್ದೇಶನದ ಕ್ರೀಡಾ ಸಿನಿಮಾ ಗೋಲ್ಡ್ ಆ ದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರವಾಗಿದೆ.

ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯನ್ನು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮೊದಲ ಬಾಲಿವುಡ್  ಚಿತ್ರವಾಗಿ ಗೋಲ್ಡ್ ಸೌದಿ ಅರಬೀಯಾದ ರಾಜಧಾನಿಯಲ್ಲಿ  ಇಂದಿನಿಂದ ಬಿಡುಗಡೆಯಾಗುತ್ತಿದ್ದು, ಸಂತೋಷದಿಂದ ಈ ವಿಷಯವನ್ನು ಹಂಚಿಕೊಳ್ಳುತ್ತಿರುವುದಾಗಿ ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.


ಗೋಲ್ಡ್ ಸಿನಿಮಾದಲ್ಲಿ 1948ರ ಲಂಡನ್  ಒಲಿಂಪಿಕ್ ನಲ್ಲಿ ಗೆದ್ದ ಭಾರತೀಯ ಆಟಗಾರರ ಕಥೆಯನ್ನು ಹೇಳಲಾಗುತ್ತಿದೆ.  ಮೌನಿ ರಾಯ್, ಅಮಿತ್ ಸಾದ್, ಕುನಾಲ್ ಕಪೂರ್ ಮತ್ತು ವಿನಿತ್ ಕುಮಾರ್ ಸಿಂಗ್  ಬಗ್ಗೆಯೂ ವಿವರಿಸಲಾಗುತ್ತಿದೆ. ಆಗಸ್ಟ್ 15 ರಂದು ಈ ಚಿತ್ರ  ಬಿಡುಗಡೆಯಾಗಿತ್ತು.

ಮೇ ತಿಂಗಳಲ್ಲಿ ಸೌದಿ ಅರಬೀಯಾ ಖಾಸಗಿ  ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ಪ್ರದರ್ಶನ ನಡೆಸಿತ್ತು. ಬ್ಲಾಕ್ ಪ್ಯಾಂಥರ್  ಯಿಂದ ಥಿಯೇಟರ್ ಗಳಲ್ಲಿ ಚಿತ್ರ  ಪ್ರದರ್ಶನವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Copyright � 2012 Kannadaprabha.com