Kannadaprabha The New Indian Express
ಮಿಸ್ ಯೂನಿವರ್ಸ್ 2018: ಭಾರತ ಪ್ರತಿನಿಧಿಸಲಿರುವ ಮುಂಬೈ ಹುಡುಗಿ ನೆಹಲ್ ಚುಡಸಾಮಾ 
By select 
01 Sep 2018 12:00:00 AM IST

ಮುಂಬೈ: 2018ನೇ ಸಾಲಿನ ಯಮಾಹಾ ಫ್ಯಾಸಿನೊ ಮಿಸ್ ದಿವಾ ಮಿಸ್ ಯೂನಿವರ್ಸ್ ಆಗಿ ನೇಹಲ್ ಚುಡಾಸಾಮಾ ಆಯ್ಕೆಯಾಗಿದ್ದಾರೆ. ಕಳೆದ ರಾತ್ರಿ ಮುಂಬೈಯಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ಕಿರೀಟ ತೊಡಿಸಲಾಯಿತು. ಈ ವರ್ಷ ಡಿಸೆಂಬರ್ ನಲ್ಲಿ ಬ್ಯಾಂಕಾಕ್ ನಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ 2018ರಲ್ಲಿ ನೇಹಲ್ ಚುಡಾಸಮ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನೆಹಲ್ ಜಯಶಾಲಿ ಎಂದು ನಟ ಸುಶಾಂತ್ ಸಿಂಗ್ ರಜಪೂತ್ ಘೋಷಿಸಿದರು. ಕಳೆದ ವರ್ಷದ ವಿಜೇತೆ ಶ್ರದ್ಧಾ ಶಶಿಧರ್ ನೆಹಲ್ ಗೆ ಕಿರೀಟ ತೊಡಿಸಿದರು.
21 ವರ್ಷದ ನೆಹಲ್ ಗೆ ಫಿಟ್ ನೆಸ್ ಚಟುವಟಿಕೆಗಳು, ಅಥ್ಲೆಟಿಕ್ಸ್, ಡ್ಯಾನ್ಸಿಂಗ್ ಮತ್ತು ಅಡುಗೆ ಕಲೆಯಲ್ಲಿ ಆಸಕ್ತಿಯಿದೆ.

ಸಾಧನೆಗೆ ಕಠಿಣ ಶ್ರಮಕ್ಕೆ ಬದಲಿ ಮಾರ್ಗವಿಲ್ಲ ಎಂಬುದು ನೆಹಲ್ ಅವರ ಅನುಭವದ ಮಾತಾಗಿದೆ.

ಜೈಪುರದ ಅದಿತಿ ಹುಂಡಿಯಾ ಯಮಾಹಾ ಫಾಸಿನೊ ಮಿಸ್ ದಿವಾ ಯೂನಿವರ್ಸ್ ಸೂಪರ್ ನ್ಯಾಶನಲ್ 2018 ಮೊದಲ ರನ್ನರ್ ಅಪ್ ಆಗಿ ಮತ್ತು ಯಮಹಾ ಫಾಸಿನೊ ಮಿಸ್ ದಿವಾ 2018 ಎರಡನೇ ರನ್ನರ್ ಅಪ್ ಆಗಿ ಲಕ್ನೋದ ರೋಶಿನಿ ಶಿಯೊರನ್ ಆಯ್ಕೆಯಾಗಿದ್ದಾರೆ.
ನಟ ನಟಿಯರಾದ ಸುಶಾಂತ್ ಸಿಂಗ್ ರಜಪೂತ್, ಶಿಲ್ಪಾ ಶೆಟ್ಟಿ ಕುಂದ್ರಾ, ನೇಹಾ ದೂಪಿಯಾ, ಲಾರಾ ದತ್ತ ಮತ್ತು ಮಿಸ್ ಯೂನಿವರ್ಸ್ 2017ರ ಡೆಮಿ ಲೀ ನೆಲ್ ಪೀಟರ್ಸ್ ತೀರ್ಪುಗಾರರಾಗಿದ್ದರು.

Copyright � 2012 Kannadaprabha.com