Kannadaprabha The New Indian Express
ರಣವಿಕ್ರಮ ಬೆಡಗಿ ಅದಾ ಶರ್ಮಾರ ಭಯಾನಕ ಮತ್ತು ಸೆಕ್ಸಿ ಪೋಸ್, ಫೋಟೋ ವೈರಲ್! 
By select 
01 Sep 2018 12:00:00 AM IST

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಅದಾ ಶರ್ಮಾ ಇತ್ತೀಚೆಗಷ್ಟೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಸುದ್ದಿಯಾಗಿದ್ದರು ಇದೀಗ ಭಯಾನಕ ಮತ್ತು ಸೆಕ್ಸಿ ಪೋಸ್ ನೊಂದಿಗೆ ಮತ್ತೆ ಬಂದಿದ್ದಾರೆ. 

ಅದಾ ಶರ್ಮಾ ಚಕ್ರಾಸನದ ಭಂಗಿಯಲ್ಲಿ ಫೋಟೋಗೆ ಪೋಸ್ ನೀಡಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು ಫೋಟೋ ವೈರಲ್ ಆಗಿದೆ. ಇನ್ನು ಅದಾರ ನ್ಯೂ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
ಇನ್ನು ಅದಾ ಶರ್ಮಾ ಈ ರೀತಿ ಫೋಟೋಗೆ ಪೋಸ್ ನೀಡಿದ್ದು ಯಾಕೆ ಅಂತಾ ಗೊತ್ತಿಲ್ಲ. ಆದರೆ ಮೂಲಗಳ ಪ್ರಕಾರ ಅದಾ ಶರ್ಮಾ ಹಾಲಿವುಡ್ ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದಕ್ಕಾಗಿ ಸಖತ್ ತಯಾರಿ ನಡೆಸಿದ್ದಾರೆ.

Copyright � 2012 Kannadaprabha.com