Kannadaprabha The New Indian Express
ಪ್ರಿಯಾಂಕಾ ಮದುವೆಗೂ ಮುನ್ನವೇ ಭಾವಿ ಮಾವ ನಿಕ್ ತಂದೆ ದಿವಾಳಿ! 
By select 
03 Sep 2018 12:00:00 AM IST

ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚು ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಶೀಘ್ರದಲ್ಲೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್ ಜೋನಾಸ್ ಅವರನ್ನು ವಿವಾಹವಾಗಲಿದ್ದು ಈ ಮಧ್ಯೆ ಪ್ರಿಯಾಂಕಾ ಚೋಪ್ರಾರ ಭಾವಿ ಮಾವ ದಿವಾಳಿಯಾಗಿರುವ ಸುದ್ದಿ ಹೊರಬಿದ್ದಿದೆ. 

ಅಮೆರಿಕದಲ್ಲಿ ನಿಕ್ ರ ತಂದೆ ಪೌಲ್ ಜೋನ್ಸ್ ರಿಯಲ್ ಎಸ್ಟೇಟ್ ಕಂಪನಿಯೊಂದನ್ನು ನಡೆಸುತ್ತಿದ್ದು ಅದೀಗ ಭಾರೀ ಸಾಲದ ಸುಳಿಗೆ ಸಿಲುಕಿದೆ. ಕಂಪನಿ ಅಂದಾಜು 71 ಕೋಟಿ ರುಪಾಯಿ ನಷ್ಟದಲ್ಲಿರುವ ಕಾರಣ ದಿವಾಳಿ ಕೋರಿ ನ್ಯಾಯಾಲಯದ ಮೊರೆ ಹೋಗಿದೆ. 

ಇನ್ನು ಪ್ರಿಯಾಂಕರನ್ನು ವರಿಸುತ್ತಿರುವ ನಿಕ್ ಅಂದಾಜು 177 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಿಂದಾಗಿ ಇಬ್ಬರ ಸಂಬಂಧಕ್ಕೆ ಧಕ್ಕೆ ಬರುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.

Copyright � 2012 Kannadaprabha.com