Kannadaprabha The New Indian Express
ಶಿಕ್ಷಕರ ದಿನ ವಿಶೇಷ: ಸಲ್ಮಾನ್, ಶಾರುಖ್ ತಮ್ಮ ಶಾಲಾ ದಿನಗಳಲ್ಲಿ ಹೇಗಿದ್ರು ಗೊತ್ತಾ? 
By select 
05 Sep 2018 12:00:00 AM IST

ಮುಂಬೈ: ಬಾಲಿವುಡ್ ನ ಹಾಟ್ ಫೇವರಿಟ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಚಿತ್ರ ಜೀವನ, ಅದರ ಸುತ್ತಲಿನ ಗಾಸಿಪ್ ಗಳ ಬಗೆಗೆ ಎಲ್ಲರಿಗೆ ತಿಳಿದಿದೆ. ಆದರೆ ಅವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು? ಅವರ ಕುರಿತು ಅವರ ಶಿಕ್ಷಕರು ಏನು ಹೇಳಿದ್ದಾರೆ ಎಂದು ಗೊತ್ತೆ? ಶಿಕ್ಷಕರ ದಿನವಾದ ಇಂದು ಬಾಲಿವುಡ್ ನ ಸ್ಟಾರ್ ನಟರಾದ ಸಲ್ಮಾನ್ ಹಾಗೂ ಶಾರೂಖ್ ಖಾನ್ ಬಗೆಗೆ ಅವರ ಶಿಕ್ಷಕರು ಏನೆಂದಿದ್ದಾರೆ ನೋಡೋಣ.

ಸಲ್ಮಾನ್ ಶಾಲೆಯಲ್ಲಿ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿದ್ದರು, ಮೃದು ಸ್ವಭಾವದಿಂದ ಕುಡಿದ್ದು ಅವರು ಶಾಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು.ಅವರು ಎಲ್ಲರೊಡನೆ ಸ್ನೇಹದಿಂದಿದ್ದರು ಎಂದು ಅವರ ಶಿಕ್ಷಕರು ಹೇಳುತ್ತಾರೆ.

 "ಸಲ್ಮಾನ್ ಸ್ವಭಾವದಿಂದ ಬಹಳ ಪ್ರೀತಿಪಾತ್ರರಾಗಿದ್ದಾರೆ. ಅವರು ಜೊತೆ ಹೊಂದಿಕೊಳ್ಳುವುದು ಬಲು ಸುಲಭವಾಗಿತ್ತು." ಅವರು ಹೇಳಿದ್ದಾರೆ..

ಇನ್ನು ಶಾಲಾ ಜೀವನದ ಬಗೆಗೆ ಹೇಳುವ ಸಲ್ಮಾನ್ ಶಿಕ್ಷಕಿ ಸಲಾನ್ ಪ್ರೀತಿಯ ವಿಚಾರವನ್ನೂ ಹೇಳಿದ್ದಾರೆ. "ಶಾಲಾ ದಿನಗಳಲ್ಲಿ ನಟ ಒಮ್ಮೆಯೂ ಹುಡುಗಿಯರತ್ತ ಕಣ್ಣೆತ್ತಿ ನೋಡುತ್ತಿರಲಿಲ್ಲ. ತನ್ನ ಬೈಕ್ ಮೇಲೆ ಶಾಲೆಗೆ ಬರುವ ವೇಳೆ ಒಮ್ಮೆಯೂ ಎಡ ಅಥವಾ  ಬಲಕ್ಕೆ ತಿರುಗಿಯೂ ನೋಡದೆ ನೇರವಾಗಿ ಶಾಲೆಗೆ ಆಗಮಿಸುತ್ತಿದ್ದ. ಆತ ಬರುವ ದಾರಿಯಲ್ಲೇ ಲೇಡೀಸ್ ಹಾಸ್ಟೆಲ್ ಇದ್ದರೂ ಅವನೊಮ್ಮೆಯೂ ಇದಕ್ಕೆ ಗಮನ ನೀಡಿರಲಿಲ್ಲ" ಮಾದ್ಯಮವೊಂದರ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಶಿಕ್ಷಕರು ಹೇಳಿದ್ದಾರೆ.

ಇನ್ನು ಬಾಲಿವುಡ್ ನ ಇನ್ನೋರ್ವ ನಟ ಶಾರುಖ್ ಬಗೆಗೆ ದೆಹಲಿಯ ಹನ್ಸ್ ರಾಜ್ ಕಾಲೇಜಿನ ಸ್ಟಾಟಿಸ್ಟಿಕ್ ಶಿಕ್ಷಕರು ತಮ್ಮ ಅಭಿಪ್ರಾಯವನ್ನು ಮಾದ್ಯಮದೆದುರು ಹಂಚಿಕೊಂಡಿದ್ದಾರೆ.

"ಶಾರುಖ್ ಖಾನ್ 1986-89ರಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ.ನಾನು ಅವನಿಗೆ ಸ್ತಾಟಿಸ್ಟಿಕ್ಸ್(ಸಂಖ್ಯಾಶಾಸ್ತ್ರ) ವಿಷಯವನ್ನು ಬೋಧಿಸುತ್ತಿದ್ದೆ.ಆತ ಯಾವಾಗಲೂ ತಡವಾಗಿ ತರಗತಿಗೆ ಆಗಮಿಸುತ್ತಿದ್ದನೆನ್ನುವುದು ನನಗೆ ಈಗಲೂ ನೆನಪಿದೆ. ಹಾಕಿ ಸ್ಟಿಕ್ ಮತ್ತು ಬೆನ್ನಿನಲ್ಲೊಂದು ಬ್ಯಾಗ್ ವನೊಂದಿಗೆ ಎಂದಿಗೂ ಇರುತ್ತಿತ್ತು." ಅವರು ಹೇಳಿದ್ದಾರೆ.

ಪ್ರಸ್ತುತ, ಶಾರುಖ್ ಮತ್ತು ಸಲ್ಮಾನ್ ಇಬ್ಬರೂ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಲ್ಮಾನ್ "ಭಾರತ್" ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರೆ ಶಾರುಖ್ ಖಾನ್ "ಝೀರೋ" ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

Copyright � 2012 Kannadaprabha.com