Kannadaprabha The New Indian Express
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿಗೆ ಗಂಡು ಮಗು ಜನನ 
By select 
06 Sep 2018 12:00:00 AM IST

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಅವರಿಗೆ ಗಂಡು ಮಗು ಜನಸಿದೆ. ಮುಂಬೈಯ ಹಿಂದುಜಾ ಆಸ್ಪತ್ರೆಯಲ್ಲಿ ಮೀರಾ ರಜಪೂತ್ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅವರಿಗೆ ಈಗಾಗಲೇ 2 ವರ್ಷದ ಮಿಶಾ ಎಂಬ ಹೆಣ್ಣು ಮಗು ಇದೆ. ನಿನ್ನೆ ಸಂಜೆ ಆಸ್ಪತ್ರೆಗೆ ತಮ್ಮ ತಾಯಿ ಬೆಲಾ ರಜಪೂತ್ ಜೊತೆಗೆ ಆಗಮಿಸಿದ್ದ ಮೀರಾ ಹೊಟ್ಟೆನೋವು ಕಾಣಿಸಿಕೊಂಡು ದಾಖಲಾಗಿದ್ದರು. ಮಗು ಜನಿಸುವ ಮುನ್ನ ಶಾಹಿದ್ ತಾಯಿ ನೀಲಿಮಾ ಅಜಿಮ್, ಮಲ ಸಹೋದರ ಇಶಾನ್ ಕಟ್ಟರ್ ಆಸ್ಪತ್ರೆಗೆ ಆಗಮಿಸಿ ಮೀರಾ ಅವರ ಆರೋಗ್ಯ ವಿಚಾರಿಸಿದ್ದರು.

2015ರ ಜುಲೈ 6ರಂದು ವಿವಾಹವಾಗಿದ್ದ ಶಾಹಿದ್ ಮತ್ತು ಮೀರಾ ಅವರದ್ದು ಹಿರಿಯರು ಸೇರಿ ನಿಶ್ಚಯ ಮಾಡಿದ್ದ ಸಂಬಂಧವಾಗಿತ್ತು. ಬಾಲಿವುಡ್ ನ ಆದರ್ಶ ದಂಪತಿ ಎಂಬ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಶಾಹಿದ್ ಅವರು 'ಬಟ್ಟಿ ಗುಲ್ ಮೀಟರ್ ಚಲು' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Copyright � 2012 Kannadaprabha.com