Kannadaprabha The New Indian Express
ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿ ಮಾಡಲು ವಿಫಲ: ಡೆತ್ ನೋಟ್ ಬರೆದಿಟ್ಟು ಹುಚ್ಚು ಅಭಿಮಾನಿ ಆತ್ಮಹತ್ಯೆ 
By select 
06 Sep 2018 12:00:00 AM IST

ವಿಜಯವಾಡ: ತಾವು ಪ್ರೀತಿಸೋ ಆರಾಧಿಸುವ ಸ್ಟಾರ್ ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ನೆಚ್ಚಿನ ನಟನ ಭೇಟಿ ಸಾಧ್ಯಾವಾಗದ್ದಕ್ಕೆ ಡೆತ್‌ ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ಘಟನೆ ನಡೆದಿದೆ.

ಕೊಮಟಾವೆಲ್ಲಿ ಅನಿಲ್‌ ಕುಮಾರ್‌ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ, ಅನಿಲ್‍ಕುಮಾರ್ ನಟ ಪವನ್‍ಕಲ್ಯಾಣ್ ಅವರ ಅಪ್ಪಟ ಅಭಿಮಾನಿ. ಒಮ್ಮೆಯಾದರೂ ತನ್ನ ನೆಚ್ಚಿನ ನಟ ಪವನ್ ಕಲ್ಯಾಣ್ ಅವರನ್ನು ನೇರವಾಗಿ ಭೇಟಿ ಆಗಬೇಕೆಂದು ಆಸೆಯನ್ನು ಹೊಂದಿದ್ದ. ಸಾಕಷ್ಟು ಬಾರಿ ಭೇಟಿ ಮಾಡಲಿಕ್ಕೆ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.

ಹೀಗಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಅಂತಿಮ ಸಂಸ್ಕಾರಕ್ಕೆ ಪವನ್‍ ಕಲ್ಯಾಣ್ ಬರಬೇಕೆಂದು ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾನೆ. ಸದ್ಯ ಈ ಬಗ್ಗೆ ಸತ್ಯನಾರಾಯಣಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright � 2012 Kannadaprabha.com