Kannadaprabha The New Indian Express
ಚೀನಾ ಪಾಕಿಸ್ತಾನ ವಿದೇಶಾಂಗ ವ್ಯವಹಾರ ಸಚಿವರ ದ್ವೀಪಕ್ಷಿಯ ಮಾತುಕತೆ: ಆರ್ಥಿಕ ಕಾರಿಡಾರ್ ಬಗ್ಗೆ ಚರ್ಚೆ 
By select 
08 Sep 2018 12:00:00 AM IST

ಇಸ್ಲಾಮಾಬಾದ್ :ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಅವರನ್ನು ಇಂದು ಭೇಟಿಯಾಗಿದ್ದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ   50 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ  ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್  ಸೇರಿದಂತೆ ಅನೇಕ ಪರಸ್ಪರ ಹಿತಸಕ್ತಿಯ ವಿಚಾರಗಳ ಕುರಿತಂತೆ  ಮಾತುಕತೆ ನಡೆಸಿದರು.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ  ಚೀನಾದ ಉನ್ನತ ಅಧಿಕಾರಿಗಳ ತಂಡ ಇಸ್ಲಾಮಾಬಾದ್ ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸಿದೆ.

ಪ್ರಾದೇಶಿಕ ಭದ್ರತೆ, ಅಪ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಉಭಯ ನಾಯಕರು   ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಚೀನಾ ಹಾಗೂ ಪಾಕಿಸ್ತಾನ ನಡುವಣ ಸ್ನೇಹ ಸಂಬಂಧ ಹೆಮ್ಮೆಪಡುವಂತಾದ್ದಾಗಿದೆ ಎಂದು ಸಭೆಯ ಬಳಿಕ ಖುರೇಷಿ ತಿಳಿಸಿದ್ದು, ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಆದ್ಯತೆ ಮೇಲೆ ಕೈಗೊಳ್ಳಲು ಚೀನಾ ಬದ್ಧವಾಗಿರುವುದಾಗಿ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಚೀನಾ ದೇಶಕ್ಕೆ ಮುಖ್ಯ ಅತಿಥಿಗಳಾಗಿ  ಆಗಮಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಚೀನಾ ವಿದೇಶಾಂಗ ಸಚಿವರು ಆಹ್ವಾನಿಸಿದ್ದು, ಪಾಕಿಸ್ತಾನ ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಭೇಟಿ ಯಾಗುವ ಸಾಧ್ಯತೆ ಇದೆ.

Copyright � 2012 Kannadaprabha.com