Kannadaprabha The New Indian Express
ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್ 
By select 
09 Sep 2018 12:00:00 AM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೊರಬಂದಿದ್ದು ತಿಳಿದ ವಿಚಾರವೇ. ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಬೇಡಿಕೊಂಡು ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ನನಗೆ ಗೊತ್ತಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. 

ಸದ್ಯ ಹಾಲಿವುಡ್ ಗಾಯಕ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೇ ವರ್ಷದಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನ ಬಹುನಿರೀಕ್ಷಿತ ಭರತ್ ಚಿತ್ರದಲ್ಲಿ ನಟಿಸಬೇಕಿದ್ದು ಕೊನೆ ಘಳಿಗೆಯಲ್ಲಿ ಚಿತ್ರದಿಂದ ಹೊರಬಂದಿದ್ದರು. 

ಇದೇ ವಿಚಾರ ಬಾಲಿವುಡ್ ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆ ಸಲ್ಮಾನ್ ಖಾನ್ ಸಹ ಬೇಸರಗೊಂಡಿದ್ದು ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಬೇಡಿಕೊಂಡಿದ್ದರು. ಅದೇ ರೀತಿ ಚಿತ್ರದಲ್ಲಿ ನಟಿಸಲು ಅವಕಾಶವನ್ನು ನೀಡಲಾಗಿತ್ತು. ಆದರೆ ದಿಢೀರ್ ಅಂತಾ ಚಿತ್ರದಿಂದ ಹೊರಹೋಗಿದ್ದು ಯಾಕೆ ಅಂತ ಗೊತ್ತ ಎಂದು ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಭರತ್ ಚಿತ್ರದಿಂದ ಹೊರಬಂದಿರುವುದು ಮದುವೆಯಾಗುವುದಕ್ಕೆ ಅಥವಾ ನನ್ನ ಜೊತೆ ಅಭಿನಯಿಸಲು ಇಷ್ಟವಿಲ್ಲದೆ ಹೊರಹೋಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ಮದುವೆಯಾಗುತ್ತಿದ್ದು ಅವರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಲ್ಮಾನ್ ಖಾನ್ ಹೇಳಿದ್ದಾರೆ.

Copyright � 2012 Kannadaprabha.com