Kannadaprabha The New Indian Express
ನಿರೂಪ್ ಭಂಡಾರಿ-ರಾಧಿಕಾ ಪಂಡಿತ್ ತಾರಾಗಣದ ಚಿತ್ರಕ್ಕೆ ಹೆಸರು 'ಆದಿ ಲಕ್ಷ್ಮಿ ಪುರಾಣ' 
By select 
10 Sep 2018 12:00:00 AM IST

ಬೆಂಗಳೂರು: ವಿ ಪ್ರಿಯಾ ನಿರ್ದೇಶನದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ, ಕಥೆಗೆ ಹೊಂದುವಂತ ಟೈಟಲ್ ಗಾಗಿ ಸಿನಿಮಾ ತಂಡ ಹುಡುಕಾಟ ನಡೆಸಿತ್ತು. ಈಗ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂದು ಹೆಸರಿಡಲಾಗಿದೆ, ರಾಕ್ ಲೈನ್ ವೆಂಕಟೇಶ್  ನಿರ್ಮಾಣದ ಈ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ನಟಿಸಿದ್ದಾರೆ, ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.

ಆದಿ ಲಕ್ಷ್ಮಿ ಪುರಾಣ ಟೈಟಲ್ ಕುತೂಹಲ ಮೂಡಿಸಿದ್ದು, ಇದೊಂದು ಪ್ರೇಮ ಕಥೆಯಾಗಿದ್ದು, ಮನೋರಂಜನಾತ್ಮಕ ಸಿನಿಮಾವಾಗಿದೆ.ಈ ಸಿನಿಮಾದಲ್ಲಿ ಹಲವು ಟ್ವಿಸ್ಟ್ ಗಳಿಗೆ. ನಿರ್ದೇಶನದ ಜೊತೆಗಿ ಪ್ರಿಯಾ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ, 

ಸದ್ಯ ಸಿನಿಮಾ ಪೋಸ್ಚ್ ಪ್ರೊಡಕ್ಷನ್ ಹಂತದಲ್ಲಿದೆ. ಪ್ರಿಯಾ ಈ ಹಿಂದೆ ಮಣಿ ರತ್ನಂ ಅವರ ಜೊತೆ ಸಹಾಯದ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಕಂದ ನಾಲ್ ಮುಧಲ್ ಮತ್ತು ಕನ್ನಮೂಚಿ ಎನ್ನಡ ಸಿನಿಮಾದಲ್ಲಿ ಸುಹಾಸಿನಿ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ್ದರು.

ಸೌಮ್ಯ ಜ್ಞಾನ ಮೂರ್ತಿ, ಜೋ ಸೈಮನ್, ಯಶ್ವಂತ್ ಶೆಟ್ಟಿ, ಭರತ್ ಕಲ್ಯಾಣ್ ಸೇರಿದಂತೆ ಹಲವರು ನಟಿಸಿದ್ದಾರೆ.

Copyright � 2012 Kannadaprabha.com