Kannadaprabha The New Indian Express
ಆಶು ಬೆದ್ರೆ ತಾರಾಗಣದ 'ರಂಗ ಮಂದಿರ' ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ 
By select 
11 Sep 2018 12:00:00 AM IST

ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ  ಆಶು ಬೆದ್ರೆ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ '  ಚಿತ್ರ ನಿರ್ಮಾಣದ ನಂತರ ಅರವಿಂದ ಶಾಸ್ತ್ರೀ ಜೊತೆಗೆ ಅಳಿದು ಉಳಿದವರು ಚಿತ್ರದಲ್ಲಿ ಅಭಿನಯಿಸಿದ್ದರು. ಈಗ  ಮತ್ತೊಂದು ಮುಖ ತೋರಿಸಲು ಸಿದ್ಧತೆ ನಡೆಸಿದ್ದಾರೆ.

ಹೊನಾರಿಯಾ ಪ್ರೊಢಕ್ಷನ್ ಅಡಿಯಲ್ಲಿ  'ರಂಗ ಮಂದಿರ ' ಶೀರ್ಷಿಕೆಯ ಚಿತ್ರದಲ್ಲಿ ಆಶು ಬೆದ್ರೆ  ಅಭಿನಯಿಸುತ್ತಿದ್ದಾರೆ.  ಗಣೇಶ ಹಬ್ಬದ ನಂತರ  ಸೆಪ್ಟೆಂಬರ್ 14 ರಿಂದ ಚಿತ್ರೀಕರಣ ಆರಂಭವಾಗಲಿದೆ. ಶಾಹುರಾಜ್ ಶಿಂಧೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ  ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಭಿನಯದ ಸ್ನೇಹನಾ ಪ್ರೀತಿನಾ, ಅರ್ಜುನ ಚಿತ್ರವನ್ನು ಶಾಹುರಾಜ್ ಶಿಂಧೆ ನಿರ್ದೇಶಿಸಿದ್ದರು.

ವಿಶೇಷ ಅಂದ್ರೆ, 8 ವರ್ಷಗಳ ಸುಧೀರ್ಘ ವಿರಾಮದ ನಂತರ ಆಶು ಜೊತೆಗೆ ಚಿತ್ರ ಮಾಡುತ್ತಿದ್ದಾರೆ. ಚೂರಿಕಟ್ಟೆ ಖ್ಯಾತಿಯ ಪ್ರವೀಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಗಮಂದಿರ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಶ್ರೃತಿ ಪ್ರಕಾಶ್ , ಅನುಪಮಗೌಡ ಜೊತೆಗೆ ಮತ್ತೊಬ್ಬ ನಾಯಕಿಯ ಹುಡುಕಾಟ ನಡೆಸಲಾಗುತ್ತಿದೆ.  ಉಳಿದಂತೆ ತೆಲಗು ನಟ ಸುಮನ್, ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್  ಅಭಿನಯಿಸುತ್ತಿದ್ದು, ಜೆಸ್ಸಿ ಗಿಪ್ಟ್ ಸಂಗೀತ ಸಂಯೋಜನೆ ಕಾರ್ಯ ನಿರ್ವಹಿಸುತ್ತಿದ್ದಾರೆ.

Copyright � 2012 Kannadaprabha.com