Kannadaprabha The New Indian Express
ಅಭಿಮಾನಿಗಳು ಮತ್ತು ಹಚ್ಚ ಹಸಿರಿನ ನಡುವೆ ಯಶ್ ನಟನೆಯ 'ಮೈ ನೇಮ್ ಇಸ್ ಕಿರಾತಕ' ಶೂಟಿಂಗ್! 
By select 
11 Sep 2018 12:00:00 AM IST

2011ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ಕಿರಾತಕ ಚಿತ್ರದ ಸೀಕ್ವೆಲ್ ನಲ್ಲಿ ನಟಿಸಲು ರಾಕಿಂಗ್ ಸ್ಟಾರ್ ಯಶ್ ಭರ್ಜರಿ ತಯಾರಿ ನಡೆಸಿದ್ದು ಹಚ್ಚ ಹಸಿರಿನ ಗ್ರಾಮದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. 

ಸಕ್ಕರೆ ನಾಡು ಮಂಡ್ಯದಲ್ಲಿ ಮೈ ನೇಮ್ ಇಸ್ ಕಿರಾತಕ ಚಿತ್ರದ ಶೂಟಿಂಗ್ ಕಳೆದ ಸೋಮವಾರದಿಂದ ಪ್ರಾರಂಭಗೊಂಡಿದೆ. ಇನ್ನು ಈ ಚಿತ್ರದಲ್ಲಿ ಯಶ್ ಮತ್ತೊಮ್ಮೆ ಮಂಡ್ಯ ಭಾಷೆಯಲ್ಲಿ ಡೈಲಾಗ್ ಹೊಡೆಯಲಿದ್ದಾರೆ. 

ಯಶ್ ಗೆ ಕರ್ನಾಟಕದಾದ್ಯಂತ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ಚಿತ್ರೀಕರಣದ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದು ಅಭಿಮಾನಿಗಳನ್ನು ನಿಯಂತ್ರಿಸುವುದೇ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿ ಶ್ವೇತ ನಂದಿತಾ ಅಭಿನಯಿಸುತ್ತಿದ್ದಾರೆ. ಕಿರಾತಕ ಚಿತ್ರದಲ್ಲಿ ನಟಿಸಿದ್ದ ತಾರಾ, ಟಿಎಸ್ ನಾಗಾಭರಣ, ಚಿಕ್ಕಣ್ಣ ಮತ್ತು ಕುರಿ ಪ್ರತಾಪ ಸೀಕ್ವೆಲ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. 

ಮೊದಲ ಹಂತದ ಚಿತ್ರೀಕರಣ ಮುಕ್ತಾಯದ ಬಳಿಕ ಚಿತ್ರದಲ್ಲಿನ ಯಶ್ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದು ಚಿತ್ರ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

Copyright � 2012 Kannadaprabha.com