Kannadaprabha The New Indian Express
ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್! 
By select 
11 Sep 2018 12:00:00 AM IST

ತಿರುವನಂತಪುರ: ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ. 

ಪ್ರವಾಹದ ವೇಳೆ ಸಂತ್ರಸ್ತರು ದೋಣಿಯನ್ನು ಹತ್ತಲು ನೆರವಾಗಲು ಜೈಸಲ್ ನೀರಿನ ಮಧ್ಯೆ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಜೈಸಲ್ ನಡೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು. 

ಇದೀಗ ಮಹೀಂದ್ರ ಸಂಸ್ಧೆ ತನ್ನ ಹೊಸ ಉತ್ಪನ್ನ ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಂದಿದ್ದ ಮಹಿಂದ್ರ ಮರಾಜೋ ಕಾರನ್ನು ಮಹೀಂದ್ರ ಕಾರು ಮಾರಾಟ ಘಟಕ ಈರಂ ಮೋಟಾರ್ಸ್ ವತಿಯಿಂದ ಜೈಸಲ್ ಗೆ ನೀಡಿದೆ. 

ಮಹೀಂದ್ರ ಮರಾಜೋ ಕಾರಿನ ಬೆಲೆ 9..99 ಲಕ್ಷ ರುಪಾಯಿಯಾಗಿದ್ದು ಕೇರಳ ಕಾರ್ಮಿಕ ಸಚಿವ ಟಿಪಿ ರಾಮಕೃಷ್ಣನ್ ಅವರು ಜೈಸಲ್ ಗೆ ಕಾರಿನ ಕೀ ನೀಡಿದರು.

Copyright � 2012 Kannadaprabha.com