Kannadaprabha The New Indian Express
ಮತ್ತೆ ಸಾರ್ವಕಾಲಿಕ ಕುಸಿತ: ಡಾಲರ್ ಎದುರು 73 ಕ್ಕೆ ತಲುಪಿದ ರೂಪಾಯಿ ಮೌಲ್ಯ! 
By select 
12 Sep 2018 12:00:00 AM IST

ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆ ಮುಂದುವರೆದಿದ್ದು, ಜಾಗತಿಕ ಕರೆನ್ಸಿ ಡಾಲರ್ ಎದುರು ರೂಪಾಯಿ ಮೌಲ್ಯ 73 ರ ಸನಿಹಕ್ಕೆ ತಲುಪಿದೆ. 

ಸೆ.12 ರಂದು ಪ್ರಾರಂಭವಾದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 72.91 ರಷ್ಟಕ್ಕೆ ಕುಸಿದಿದ್ದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 78 ಡಾರ್ ಗೆ ತಲುಪಿರುವ ಹಿನ್ನೆಲೆಯಲ್ಲಿ ಡಾಲರ್ ಪ್ರಾಬಲ್ಯ ಕಾಯ್ದುಕೊಂಡಿದೆ. 

ಸೆ.11 ರಂದು ಡಾಲರ್ ಎದುರು ರೂಪಾಯಿ ಮೌಲ್ಯ 72.30 ರೂಪಾಯಿಗಳಷ್ಟು ದಾಖಲಾಗಿತ್ತು. ವರ್ಷಾರಂಭದಿಂದ ಈ ವರೆಗೂ ರೂಪಾಯಿ ಮೌಲ್ಯ ಶೇ.12 ರಷ್ಟು ಕುಸಿತಗೊಂಡಿದ್ದು, ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ. 

Copyright � 2012 Kannadaprabha.com