Kannadaprabha The New Indian Express
ಸುದೀಪ್ 'ಪೈಲ್ವಾನ್' ಗೆ ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಸ್ಟಂಟ್ಸ್! 
By select 
12 Sep 2018 12:00:00 AM IST

ಬೆಂಗಳೂರು: ಕೆಸಿಸಿ ಕ್ರಿಕೆಟ್ ಕಪ್ ಮುಗಿದಿದ್ದು, ಕೃಷ್ಣ ನಿರ್ದೇಶನಕ ಪೈಲ್ವಾನ್ ಚಿತ್ರದ ಶೂಟಿಂಗ್ ಗೆ ಸುದೀಪ್ ವಾಪಾಸಾಗಿದ್ದಾರೆ. ಸಿನಿಮಾಗೆ ಅಂತಾರಾಷ್ಟ್ರೀಯ ಫೈಟರ್ ಹಾಲಿವುಡ್ ನ ಲಾರ್ನೆಲ್ ಸ್ಟೋವಲ್ ಅವರನ್ನು ಕರೆ ತಂದಿದ್ದಾರೆ.

ಲರ್ನೆಲ್ ಸ್ಟೋವಲ್ ಅಮೇರಿಕಾದ ಜನಪ್ರಿಯ ಕ್ರೀಡಾಪಟು. ಫೈಟಿಂಗ್​, ಮಾರ್ಷೆಲ್​ ಆರ್ಟ್ಸ್​ನಲ್ಲಿ ವಿಶ್ವ ವಿಖ್ಯಾತ ಕ್ರೀಡಾಪಟು. ಆದರೆ, 2001ರಲ್ಲಿ ಸಿನಿಮಾ ರಂಗದಲ್ಲಿಯೇ ನೆಲೆಸಲು ಮನಸ್ಸು ಮಾಡಿದ್ದರು. ಅಲ್ಲಿಂದ ನೂರಕ್ಕೂ ಅಧಿಕ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ದುಡಿದಿದ್ದಾರೆ. ಟೈಟಾನ್ಸ್​, ಫೇಟ್​ ಆಫ್​ ದಿ ಫ್ಯೂರಿಯಸ್, ದಿ ಪ್ರಿನ್ಸ್​, ಸ್ಟೋಲನ್​, ಸ್ನೋಫಾಲ್ ಗಳಲ್ಲಿ ಕೆಲಸ ಮಾಡಿದ್ದಾರೆ

ಲರ್ನೆಲ್​ ತಮಿಳಿನ ‘ಬೂಲೊಗಂ’ ಸಿನಿಮಾದಿಂದ ಭಾರತಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮುಂದೆ ಸುಲ್ತಾನ್​, ಬಾಹುಬಲಿ- 2 ನಲ್ಲೂ ಟ್ಯಾಲೆಂಟ್​ ಏನು ಅಂತಾ ತೋರಿಸಿಕೊಟ್ಟಿದ್ದರು. ಸುಲ್ತಾನ್​ ಮತ್ತು ಬಾಹುಬಲಿ- 2 ಸಿನಿಮಾದ ಸಾಹಸ ಲರ್ನೆಲ್​ಗೆ ‘ಭಾಗ್ಯದ ಬಾಗಿಲು’ ತೆರೆಯಿತು. 

ಅಕ್ಟೋಬರ್ ನಲ್ಲಿ ಲರ್ನೆಲ್ ಭಾರತಕ್ಕೆ ಆಗಮಿಸಲಿದ್ದು,  ನಟ ಸುದೀಪ್ ಬದಲಾಗಿ ಡಮ್ಮಿ ಕ್ಯಾರೆಕ್ಟರ್ ಜೊತೆ ಫೈಟಿಂಗ್ ಮಾಡಲಿದ್ದಾರೆ, ಸುದೀಪ್ ಗೆ ಅಂತಿಮ ಶಾಟ್ ನ ತರಬೇತಿ ನೀಡಲಿದ್ದಾರೆ.

ಸಿನಿಮಾದ ಪ್ರಮುಖ ದೃಶ್ಯವನ್ನು ಸದ್ಯ ಹೈದರಾಬಾದ್ ನ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಮುಂದಿನ ಶೂಟಿಂಗ್ ನಡೆಯಲಿದೆ, .

ಸಿನಿಮಾವನ್ನ ಜಾಗತಿಕ ಮಾರುಕಟ್ಟೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಕೋಟಿ ಕೋಟಿ ಸುರಿಯುತ್ದಿದ್ದಾರೆ. ಕೃಷ್ಣರ ಶ್ರಮಕ್ಕೆ ತಕ್ಕಂತೆ ಕಿಚ್ಚ ಸುದೀಪ್‌ ಕೂಡ ಸಾಥ್‌ ನೀಡಿದ್ದಾರೆ.

Copyright � 2012 Kannadaprabha.com