Kannadaprabha The New Indian Express
ಬಂಧಿತ ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನ ಸೆ.17 ಅವರೆಗೆ ವಿಸ್ತರಣೆ: ಸುಪ್ರೀಂ ಕೋರ್ಟ್ 
By select 
12 Sep 2018 12:00:00 AM IST

ನವದೆಹಲಿ: ಮಾವೋವಾದಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ 5 ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನವನ್ನು ಸೆ.17 ರ ವರೆಗೆ ವಿಸ್ತರಿಸಲಾಗಿದೆ. 

ಈ ವರವರ ರಾವ್ ಸೇರಿದಂತೆ 5 ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದರು.  ರೋಮಿಲಾ ಥಾಪರ್ ಸೇರಿದಂತೆ ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪೀಂ ಕೋರ್ಟ್ ಸೆ.17 ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೂ  ಗೃಹ ಬಂಧನವನ್ನು ವಿಸ್ತರಿಸಲಾಗಿದೆ. 

ವರವರರಾವ್- ಅರುಣ್ ಫೆರೀರಾ, ವರ್ನನ್ ಗೊನ್ಸಾಲ್ವ್ಸ್, ಸುಧಾ ಭರದ್ವಾಜ್ ಮತ್ತು ಗೌತಮ್ ನವಲಾಖಾ ಅವರ ಬಂಧನವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ  ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ಎಎಂ ಖನ್ವಾಲಿಕರ್ ಹಾಗೂ ಡಿವೈ ಚಂದ್ರಚೂಡ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. 

ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಪ್ರಶ್ನಿಸಿದ್ದ ಅರ್ಜಿದಾರರ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತೊಂದು ಕೋರ್ಟ್ ನಲ್ಲಿ ವ್ಯಸ್ಥರಾಗಿದ್ದ ಕಾರಣ ಸೆ.17 ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಲ್ಲಿಯವರೆಗೂ ಗೃಹ ಬಂಧನವನ್ನು ವಿಸ್ತರಿಸಲಾಗಿದೆ. 

Copyright � 2012 Kannadaprabha.com