Kannadaprabha The New Indian Express
ಶಿವಮೊಗ್ಗ: ಮಾಜಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಬರ್ಬರ ಹತ್ಯೆ 
By select 
12 Sep 2018 12:00:00 AM IST

ಶಿವಮೊಗ್ಗ: ಮಾಜಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ಶಿವಮೊಗ್ಗ ನಗರದ ದುರ್ಗಿಗುಡಿ ಬಳಿ ಗಿರಿ( (45)  ಹತ್ಯೆಯಾಗಿದೆ.

ಹೂವಿನ ವ್ಯಾಪಾರಿಯಾಗಿದ್ದ ಗಿರಿ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ದುರ್ಗಿಗುಡಿ ರಸ್ತೆಯ ಸೂರ್ಯ ಕಂಫರ್ಟ್‌ ಹೊಟೇಲ್‌ ಸಮೀಪ ಕಾರಿನಲ್ಲಿ ತೆರಳುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಲ್ಲದೆ ಮಾರಕಾಸ್ತ್ರಗಳಿಂದ ಗಿರಿ ಮೇಲೆ ಹಲ್ಲೆ ನಡೆಸಿದ್ದಾರೆ. ಹತ್ಯೆ ಮಾಡಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದರೆ ಗಿರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಾರಿನಲ್ಲಿದ್ದ ಗಿರಿ ಸಹಚರರು ಹೊಡೆತದಿಂಡ ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಗಿರಿ ಕಾರಿನ ಗಾಜುಗಳು ಪುಡಿಯಾಗಿದೆ.

ತಿಂಗಳ ಕಾಲ ಜೈಲಿನಲ್ಲಿದ್ದ ಗಿರಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದಾಗಿ ಪೋಲೀಸರು ಹೇಳಿದ್ದು ದೊಡ್ಡಪೇಟೆ ಠಾಣೆ ಪೋಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಗಿರಿ ಹತ್ಯೆ ಬಳಿಕ ಶಿವಮೊಗ್ಗ ನಗರದಲ್ಲಿ ಭಯದ ಕಾರ್ಮೋಡ ಆವರಿಸಿದೆ.

Copyright � 2012 Kannadaprabha.com