Kannadaprabha The New Indian Express
'ತವರಿಗೆ ಬಾ ತಂಗಿ': ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು 
By select 
12 Sep 2018 12:00:00 AM IST

ಮಂಡ್ಯ: ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು 'ತವರಿಗೆ ಬಾ ತಂಗಿ' ಎಂಬ ಸಂದೇಶದೊಂದಿಗೆ ಗೌರಿ-ಗಣೇಶ ಹಬ್ಬಕ್ಕೆ ಪೋಸ್ಟ್ ಮುಖಾಂತರ ಬಾಗಿನ ಕಳುಹಿಸಿ ಕೊಟ್ಟಿದ್ದಾರೆ.

ಇಂದು ನಗರದ ಮುಖ್ಯ ಅಂಚೆ ಕಚೇರಿಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಕಳೆದ ಒಂದು ವರ್ಷದಿಂದ ಜಿಲ್ಲೆಯಿಂದ ನಾಪತ್ತೆಯಾಗಿರುವ ರಮ್ಯಾರವರು ಪುನಃ ಮಂಡ್ಯಕ್ಕೆ ಆಗಮಿಸುವಂತೆ ಬಾಗಿನ ಕಳುಹಿಸುವ ಮೂಲಕ ಆಹ್ವಾನಿಸಿದ್ದಾರೆ.

ರಮ್ಯಾ ಅವರು ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗಳಿಗೂ ಮತಚಲಾಯಿಸಲು ಬಂದಿಲ್ಲ. ಗೌರಿ-ಗಣೇಶ ಹಬ್ಬಕ್ಕಾದರೂ ತವರು ಕ್ಷೇತ್ರ ಮಂಡ್ಯಕ್ಕೆ ಆಗಮಿಸಿ, ಜನರ ಕಷ್ಟಕ್ಕೆ ಸ್ಪಂದಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.

ಬಾಗಿನದಲ್ಲಿ ಹೂವು, ಬಳೆ ಹಾಗೂ ತೆಂಗಿನಕಾಯಿ ಸೇರಿದಂತೆ ಎಲ್ಲವನ್ನೂ ಅಂಚೆ ಮೂಲಕ ರಮ್ಯಾಗೆ ರವಾನಿಸಿದ್ದಾರೆ.

Copyright � 2012 Kannadaprabha.com