Kannadaprabha The New Indian Express
ಪ್ರಧಾನಿ ಮೋದಿ 'ಅನ್ಪಡ್-ಗವಾರ್' ಎಂದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ 
By select 
12 Sep 2018 12:00:00 AM IST

ಮುಂಬೈ: ಸದಾ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು  'ಅನ್ಪಡ್-ಗವಾರ್' ಎಂದು ಕರೆದಿದ್ದಾರೆ.

ದೇಶಾದ್ಯಂತ ಶಾಲೆಗಳಲ್ಲಿ ಪ್ರಧಾನಿ ಮೋದಿ ಜೀವನ ಕುರಿತ ಚಿತ್ರ ಪ್ರದರ್ಶಿಸಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಅವರು, ಮೋದಿಯಂತಹ ಒಬ್ಬ ಅನಕ್ಷರಸ್ಥ ಮತ್ತು ಅನಾಗಕರಿಕ ವ್ಯಕ್ತಿಯ ಜೀವನದಿಂದ ಶಾಲಾ- ಕಾಲೇಜ್ ವಿದ್ಯಾರ್ಥಿಗಳಿಗೆ ಏನು ಲಾಭ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಮಕ್ಕಳು ಆ ಚಿತ್ರವನ್ನು ನೋಡಬಾರದು. ಏಕೆಂದರೆ ಅವರಿಗೆ ನಮ್ಮ ಪ್ರಧಾನಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಮೋದಿ ಕುರಿತು ಒಂದು ಸಾಕ್ಷ್ಯ ಚಿತ್ರವಿದ್ದು, ಅದನ್ನು ಶಾಲೆಗಳಲ್ಲಿ ಬಲವಂತವಾಗಿ ಪ್ರದರ್ಶಿಸಲಾಗುತ್ತಿದೆ. ಇದು ದೊಡ್ಡ ತಪ್ಪು. ನಮ್ಮ ಮಕ್ಕಳು ರಾಜಕೀಯದಿಂದ ದೂರವಿರಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

Copyright � 2012 Kannadaprabha.com