Kannadaprabha The New Indian Express
ಘೋರ ದುರಂತ: ಚೆನ್ನೈನಲ್ಲಿ ನಡೆದ ಅಪಘಾತದದಲ್ಲಿ ಸತ್ತ ವ್ಯಕ್ತಿ ದೇಹ ಕರ್ನೂಲ್ ನಲ್ಲಿ ಸಿಕ್ತು! 
By select 
11 Jan 2019 12:00:00 AM IST

ಕರ್ನೂಲ್:, ಭೀಕರ ಅಪಘಾತವೊಂದರಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ ಕಾರಣ ದ್ವಿಚಕ್ರ ವಾಹನದಲ್ಲಿದ್ದ ಯುವಕನ ದೇಹ ಅದೇ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಯೊಳಕ್ಕೆ ಬಿದ್ದಿದೆ.

ಚೆನ್ನೈ ಸಮೀಪ ನಡೆದಿದ್ದ ಈ ಅಪಘಾತದ ವಿವರ ತಿಳಿಯದ  ಲಾರಿಯ ಚಾಲಕ ಬರೋಬ್ಬರಿ 400  ಕಿಮೀ ದೂರದ ಕರ್ನೂಲ್ ಗೆ ಬಂದು ನೋಡಿದಾಗ ಬೆಳಕು ಕಂಡಿದೆ. ಗುರುವಾರ ರಾತ್ರಿ ಚೆನ್ನೈ-ತಿರುಪತಿ ಹೆದ್ದಾರಿಯ ಪಂಡೂರ್ ಎಂಬಲ್ಲಿ ಈ ಅಪಘಾತ ನಡೆದಿತ್ತು. ಆವೇಳೆ ಬೈಕ್ ಸವಾರ ಕಾರ್ ಗುದ್ದಿದ ರಭಸಕ್ಕೆ ಎದುರಿನಿಂದ ಬರುತ್ತಿದ್ದ ಲಾರಿಯೊಳಕ್ಕೆ ಬಿದ್ದಿದ್ದಾನೆ. ಆದರೆ ಲಾರಿ ಚಾಲಕನಿಗೆ ಈ ಅಪಘಾತದ ಬಗ್ಗೆ ಮಾಹಿತಿಯೇ ಇರಲಿಲ್ಲ! ಆತ ಲಾರಿಯನ್ನು ಕರ್ನೂಲ್ ಗೆ ತಂದ ನಂತರ ಲಾರಿಯಲ್ಲಿ ಮೃತದೇಹವಿರುವುದು ಕಂಡು ಆಘಾತಗೊಂಡಿದ್ದಾನೆ. ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿ ದ್ದು ಪೋಲೀಸರು ಯುವಕನ ಶವವನ್ನು ವಶಕ್ಕೆ ಪಡೆದರು.

ಮೃತ ಯುವಕನನ್ನು ಸುಧಾಕರ್ ಎಂದು ಗುರುತಿಸಲಾಗಿದ್ದು ಈತ ಪಂಡೂರ್ ನಿವಾಸಿಯಾಗಿದ್ದ. ಕಕ್ಕೂರ್ನಲ್ಲಿರುವ ಎಸ್ ಐಪಿಸಿಒಟಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದನೆನ್ನಲಾಗಿದೆ. ಬುಧವಾರ ರಾತ್ರಿ 11ರ ಸುಮಾರಿಗೆ ಕಛೇರಿ ಬಿಟ್ಟಿದ್ದ ಯುವಕ ಮನೆಯತ್ತ ಹೊರಟಾಗ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ  ಅಪಘಾತಕ್ಕೀಡಾಗಿದ್ದಾನೆ. ಆತನ ದೇಹ ಖಾಲಿಯಾಗಿದ್ದ ಲಾರಿಯೊಳಕ್ಕೆ ಎಸೆಯಲ್ಪಟ್ಟಿದೆ. ಆದರೆ ಆತನ ಬಲಗಾಲು ಅಪಘಾತವಾಗಿದ್ದ ಸ್ಥಳದ ಸಮೀಪ ದೊರಕಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ತಿರುವಳ್ಳುವರ್ ಪೋಲೀಸರು ಅಪಘಾತಕ್ಕೀಡಾಗಿದ್ದ ವಾಹನ ಹಾಗೂ ಮೃತನ ಕಾಲನ್ನು ವಶಕ್ಕೆ ಪಡೆಇದ್ದರು. ವಾಹನದ ನೊಂದಣಿ ಸಂಖ್ಯೆಯ ಆಧಾರದ ಮೇಲೆ ಯುವಕನ ಗುರುತು ಪತ್ತೆ ಹಚಿದ ಪೋಲೀಸರು ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಪಘಾತಕ್ಕೆ ಕಾರಣವಾಗಿದ್ದ ಕಾರು ಚಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದ್ದಾರೆ.

ಇತ್ತ ಲಾರಿ ಚಾಲಕ ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿರುವ ಗೋಡನ್ ಗೆ ಆಗಮಿಸಿದ್ದು ಮೃತದೇಹ ನೊಡಿ ಆಘಾತಗೊಂಡು ಪೋಲೀಸರಿಗೆ ತಿಳಿಸಿದ್ದ. ಆಗ ಪೋಲೀಸರು ತಮಿಳುನಾಡಿನ ಪೋಲೀಸರಿಗೆ ಮಾಹಿತಿ ನೀಡಿ ಅಂತಿಮವಾಗಿ ಸುಧಾಕರ್ ಮನೆಯವರಿಗೆ ಮೃತದೇಹವನ್ನು ನಿಡಲಾಗಿದೆ.

Copyright � 2012 Kannadaprabha.com