Kannadaprabha The New Indian Express
ಕೇಂದ್ರ ಸಚಿವ ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲು ರಾಹುಲ್ ಗಾಂಧಿ, ಚಿದಂಬರಂ ಹಾರೈಕೆ 
By select 
17 Jan 2019 12:00:00 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಶೀಘ್ರ ಗುಣಮುಖರಾಗುವಂತೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಹಾರೈಸಿದ್ದಾರೆ.

ತಮ್ಮ ಸಹೋದ್ಯೋಗಿ ಹಾಗೂ ನ್ಯಾಯವಾದಿಯಾಗಿರುವ ಜೇಟ್ಲಿಯವರ ಅನಾರೋಗ್ಯ ವಿಷಯ ಕೇಳಿ ತೀವ್ರ ದುಃಖವಾಯಿತು. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರುಣ್ ಜೇಟ್ಲಿಯವರು ಶೀಘ್ರ ಗುಣಮುಖರಾಗಬೇಕೆಂದು ಹಾರೈಸಿದ್ದಾರೆ.

ಕಳೆದ ವರ್ಷ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದ 66 ವರ್ಷದ ಅರುಣ್ ಜೇಟ್ಲಿ ಕಳೆದ ಭಾನುವಾರ ಅಮೆರಿಕಾಕ್ಕೆ ನಿಗದಿತ ವೈದ್ಯಕೀಯ ತಪಾಸಣೆಗೆಂದು ತೆರಳಿದ್ದರು. ಈ ವಾರಾಂತ್ಯ ಅವರು ಭಾರತಕ್ಕೆ ಹಿಂತಿರುಗಲಿದ್ದಾರೆ.

Copyright � 2012 Kannadaprabha.com