Kannadaprabha The New Indian Express
ಕ್ರೇಜಿಸ್ಟಾರ್ ನಟನೆಯ ದಶರಥ ಸಿನಿಮಾ ಟೈಟಲ್ ಸಾಂಗ್ ಗೆ ಚಾಲೆಂಜಿಂಗ್ ಸ್ಟಾರ್ ಧ್ವನಿ! 
By select 
23 Jan 2019 12:00:00 AM IST

ಎಂ.ಎಸ್. ರಮೇಶ್ ನಿರ್ದೇಶನದಲ್ಲಿ ರಿಲೀಸ್‌ಗೆ ರೆಡಿ ಆಗಿರೋ ದಶರಥ ಸಿನಿಮಾದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಹಾಡಿರೋ ಹಾಡಿಗೆ, ಕ್ರೇಜಿಸ್ಟಾರ್​ ರವಿಚಂದ್ರನ್​ ಸ್ಟೆಪ್ ಹಾಕಿದ್ದಾರೆ. 

ನೆರೇಷನ್​ಮಾಡಿ ಸೈ ಎನಿಸಿಕೊಂಡಿದ್ದ ದರ್ಶನ್​ ಈಗ ಕ್ರೇಜಿಸ್ಟಾರ್‌ಗಾಗಿ ಹಾಡನ್ನೇ ಹಾಡಿದ್ದು, ದರ್ಶನ್ ಧ್ವನಿಯಲ್ಲಿ ಹಾಡು ಹೇಗೆ ಕೇಳಲಿದೆ, ಅದಕ್ಕೆ ರವಿಚಂದ್ರನ್ ಡ್ಯಾನ್ಸ್ ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

ಹಾಡಲು ದರ್ಶನ್ ನಿರಾಕರಿಸಿದರು, ಆದರೆ ಅವರದ ಶೈಲಿಯಲ್ಲೇ ದರ್ಶನ್ ಹಾಡಿನ ಸಾಹಿತ್ಯ ಓದಿದ್ದಾರೆ, ಇದು ಚಿತ್ರತಂಡಕ್ಕೂ ಇಷ್ಟವಾಗಿದೆ, ಇದಕ್ಕೆ ಹೊಂದುವ ಹಿನ್ನೆಲೆ ಸಂಗೀತ ನೀಡಲು ನಿರ್ಧರಿಸಿದೆ, ಇದನ್ನು ಟೈಟಲ್ ಟ್ರ್ಯಾಕ್ ಆಗಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. 

ರಾಮಾಯಣದ ದಶರಥನ ಪಾತ್ರವನ್ನು  ರವಿಚಂದ್ರನ್ ಹೇಗೆ ನಟಿಸಿದ್ದಾರೆ ಎಂಬ ಬಗ್ಗೆ 
ನಿರೂಪಿಸಲಾಗಿದೆ, ಕಥಾ ನಾಯಕನ ಪಾತ್ರ ಪರಿಚಯ ದರ್ಶನ್ ಧ್ವನಿಯಾಲಾಗಿದೆ,

ಸಿನಿಮಾದಲ್ಲಿ ಇದನ್ನು ಸರ್ ಪ್ರೈಸ್ ಎಲಿಮೆಂಟ್ ಆಗಿ ಬಳಸಲಾಗಿದೆ, ಆರಂಭದಲ್ಲಿ ಮಾತ್ರವಲ್ಲ, ಕ್ಲೈಮ್ಯಾಕ್ಸ್ ನಲ್ಲೂ ಕೂಡ ದರ್ಶನ್ ಧ್ವನಿ ಬಳಸಲಾಗಿದೆ,, ಆಕಾಶ್ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ತಿಂಗಳ ಹಿಂದೆ ವಾಯ್ ಮಿಕ್ಸಿಂಗ್ ಕೆಲಸ ಮಾಡಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ಚಂದು ಸಿನಿಮಾದಲ್ಲಿ ನಟಿಸಿದ್ದ ಸೋನಿಯಾ ಅಗರ್ವಾಲ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ರವಿಚಂದ್ರನ್‌ಗೆ ಜೋಡಿಯಾಗಿದ್ದಾರೆ. ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ಪ್ರಿಯಾಮಣಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Copyright � 2012 Kannadaprabha.com