Kannadaprabha The New Indian Express
ಉಡುಪಿ: ಜಮೀನಿನ ವಿಚಾರಕ್ಕೆ ಜಗಳ ಇಬ್ಬರು ಯುವಕರ ಕೊಲೆಯಲ್ಲಿ ಅಂತ್ಯ! 
By select 
27 Jan 2019 12:00:00 AM IST

ಉಡುಪಿ: ಜಮೀನು ವಿಚಾರದಲ್ಲಿ ಸ್ನೇಹಿತನನ್ನು ಬೆಂಬಲಿಸಲು ಬಂದಿದ್ದ ಯುವಕರಿಬ್ಬರನ್ನು ತಲ್ವಾರ್ ನಿಂದ ಕೊಚ್ಚಿ ಕೊಂದು ಹಾಕಿರುವ ಅಮಾನುಷ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. 

ಉಡುಪಿ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದ ಈ ದುರ್ಘಟನೆಯಲ್ಲಿ ಭರತ್ ಮತ್ತು ಯತೀಶ್ ಎಂಬ ಯುವಕರು ಕೊಲೆಯಾಗಿದ್ದಾರೆ. ಕೋಟ ರಾಜಲಕ್ಷ್ಮೀ ಸಭಾಂಗಣದ ಸರ್ವೀಸ್​ ರಸ್ತೆಯಲ್ಲಿ ಈ ಪ್ರಕರಣ ನಡೆಇದ್ದು ಇವರು ತಮ್ಮ ಸ್ನೇಹಿತ ರೋಹಿತ್ ಎನ್ನುವವನ ಬೆಂಬಲಕ್ಕೆ ನಿಂತ ಕಾರಣ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿ ಭರತ್ ಹಾಗೂ ಯತೀಶ್ ತಮ್ಮ ಸ್ನೇಹಿತ ರೋಹಿತ್ ನ ಸಹಾಯಕ್ಕೆ ಬಂದಿದ್ದರು.ಶನಿವಾರ ತಡರಾತ್ರಿ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.ಹಲ್ಲೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಮೃತ ಯತೀಶ್ ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಆಪ್ತನಾಗಿ ಕೆಲಸ ನಿರ್ವಹಿಸಿದ್ದರು. ಭರತ್ ಕೋಟಾದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಗಾಯಗೊಂಡಿದ್ದ ಇಬ್ಬರೂ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Copyright � 2012 Kannadaprabha.com