Kannadaprabha The New Indian Express
ಒರು ಆಡಾರ್ ಲವ್: ಲಿಪ್ ಲಾಕ್ ದೃಶ್ಯದಿಂದ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ಟ್ರೋಲ್ ಗೆ ಗುರಿ! 
By select 
09 Feb 2019 12:00:00 AM IST

ನವದೆಹಲಿ:  ಒರು ಆಡಾರ್ ಲವ್ ಚಿತ್ರದಲ್ಲಿನ ಕಣ್ಸನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿ ರಾತ್ರೋ ರಾತ್ರಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅದೇ ಸಿನಿಮಾದಲ್ಲಿನ ಲಿಪ್ ಲಾಕ್  ದೃಶ್ಯದಿಂದಾಗಿ  ಟ್ರೋಲಾಗುತ್ತಿದ್ದಾರೆ.

ಒಮರ್ ಲೂಲೂ  ನಿರ್ದೇಶನದ  ಒರು ಆಡಾರ್ ಲವ್ ಚಿತ್ರದಲ್ಲಿ ಶಾಲಾ ಆವರಣದಲ್ಲಿ  ನಾಯಕ ನಟ ರೋಷನ್ ಅಬ್ದುಲ್ ರಾಹೊಪ್ ಜೊತೆಗೆ ಪ್ರಿಯಾ ವಾರಿಯರ್  ಲಿಪ್ ಲಾಕ್  ಮಾಡಿರುವ ವಿಡಿಯೋ ಇದಾಗಿದೆ.ಫೆಬ್ರವರಿ 6 ರಂದು ಬಿಡುಗಡೆಯಾಗಿರುವ ಈ  ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ 1, 958, 501 ಮಂದಿ ವೀಕ್ಷಿಸಿದ್ದಾರೆ. ಆದರೆ, 50 ಸಾವಿರ ಜನರು ಡಿಸ್ ಲೈಕ್ ಮಾಡಿದ್ದಾರೆ.

ಎಂತಹ ಅಸಹ್ಯ? ಇದೊಂದು ರೋಮ್ಯಾನ್ಸಾ ಅಥವಾ  ಸಿನಿಮಾ ಪ್ರಚಾರಕ್ಕಾಗಿ ಬಳಸಿರುವ ಕೆಳಮಟ್ಟದ ಹಾಟ್ ವಿಡಿಯೋನಾ ಎಂದು ಬಳಕೆದಾರರು ಪ್ರಶ್ನಿಸಿದ್ದು, ಒಂದು ನಿಮಿಷದ ವಿಡಿಯೋಗೆ ಮಿಲಿಯನ್ ಜನರು ಡಿಸ್ ಲೈಕ್ ಮಾಡುವುದನ್ನು ಕಾಯುತ್ತಿರುವುದಾಗಿ  ಕಾಮೆಂಟ್ ಮಾಡಿದ್ದಾರೆ.

ಲೈಂಗಿಕ ಚಿತ್ರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದರೆ,  ಶಾಲಾ ಮಕ್ಕಳನ್ನು ಹಾಳು ಮಾಡುವ ಇಂತಹ ಚಿತ್ರಗಳನ್ನು ನಿಷೇಧಿಸಬೇಕು ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

ಕಳೆದ ವರ್ಷ  ಕಣ್ಸನೆ  ದೃಶ್ಯದ ಮೂಲಕ ಇದ್ದಕ್ಕಿದ್ದಂತೆ  ಪ್ರಸಿದ್ಧಿಯಾದ 19 ವರ್ಷದ ಪ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ 1 ಮಿಲಿಯನ್ ಪಾಲೋವರ್ಸ್ ಹೊಂದಿದ್ದಾರೆ. ಪ್ರಶಾಂತ್ ಮಂಬೂಳ್ಳಿ ನಿರ್ದೇಶನದ ಶ್ರೀದೇವಿ ಬಂಗಲೆ ಬಾಲಿವುಡ್  ಚಿತ್ರದಲ್ಲೂ ಚೊಚ್ಚಲ ಬಾರಿಗೆ   ಪ್ರಿಯಾ ವಾರಿಯರ್ ಬಣ್ಣ ಹಚ್ಚುತ್ತಿದ್ದಾರೆ.

Copyright � 2012 Kannadaprabha.com