Kannadaprabha The New Indian Express
ಟಿ20 ಯಲ್ಲಿ ದೊಡ್ಡ ಹೈಡ್ರಾಮಾ: ಧೋನಿ ಅಪೀಲ್‌ಗೆ ಕಂಗಾಲಾಗಿ ಅಂಪೈರ್ ಔಟ್ ತೀರ್ಪು, ವಿವಾದ! 
By select 
09 Feb 2019 12:00:00 AM IST

ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಧೋನಿ ಅಪೀಲ್ ನಿಂದ ಕಂಗಲಾಗಿ ಅಂಪೈರ್ ಹಾಗೂ 3ನೇ ಅಂಪೈರ್ ಸಹ ನಾಟೌಟನ್ನು ಔಟ್ ಎಂದು ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಆಕ್ಲೆಂಡ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ 6ನೇ ಓವರ್ ನಲ್ಲಿ ಕೃಣಾಲ್ ಪಾಂಡ್ಯ ಬೌಲಿಂಗ್ ನಲ್ಲಿ ಡ್ಯಾರಿಲ್ ಮಿಚೆಲ್ ಡಿಫೇನ್ಸ್ ಆಡಲು ಹೋಗಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಲುಗಿ ಪ್ಯಾಡ್ ಗೆ ಬಿದ್ದಿತ್ತು. ಈ ವೇಳೆ ಎಂಎಸ್ ಧೋನಿ ಎಲ್ಬಿಡಬ್ಲ್ಯೂಗೆ ಜೋರಾಗಿ ಅಪೀಲ್ ಮಾಡಿದರು. ಇದರಿಂದ ಮೈದಾನದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ರ ತೀರ್ಪಿನಿಂದ ಕಂಗಾಲಾದ ಡ್ಯಾರಿಲ್ ಡಿಆರ್ಎಸ್ ಗೆ ಅಪೀಲ್ ಮಾಡಿದರು. 

ಅಂತೇ ಮೂರನೇ ಅಂಪೈರ್ ಸಹ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿದ್ದರು. ಔಟ್ ಎಂದು ತೀರ್ಪು ನೀಡಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಇನ್ನು ಮೂರನೇ ಅಂಪೈರ್ ತೀರ್ಪಿನ ವಿರುದ್ದ ನೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright � 2012 Kannadaprabha.com