Kannadaprabha The New Indian Express
ಐಸಿಸಿ ಟಿ20 ಶ್ರೇಯಾಂಕ: ಕುಲದೀಪ್ ಯಾದವ್ ವೃತ್ತಿ ಬದುಕಿನ ಅತ್ಯುತ್ತಮ ಸಾಧನೆ! 
By select 
11 Feb 2019 12:00:00 AM IST

ದುಬೈ: ಟೀಂ ಇಂಡಿಯಾದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಟಿ20 ರ್ಯಾಂಕಿಂಗ್ ನ ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದರು. ಪರಿಣಾಮ ಕುಲದೀಪ್ ಯಾದವ್ ಬೌಲರ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇನ್ನು ಯಜುವೇಂದ್ರ ಚಹಾಲ್ 17ನೇ ಸ್ಥಾನ ಹಾಗೂ ಭುವನೇಶ್ವರ್ ಕುಮಾರ್ 18ನೇ ಸ್ಥಾನಕ್ಕೇ ಇಳಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಫ್ಘಾನಿಸ್ತಾನ ತಂಡದ ಖ್ಯಾತ ಬೌಲರ್ ರಶೀದ್ ಖಾನ್ 793 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಪಾಕಿಸ್ತಾನದ ಬಾಬರ್ ಅಜಾಮ್ 885 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ನ್ಯೂಜಿಲ್ಯಾಂಡ್ ತಂಡದ ಬ್ಯಾಟ್ಸ್ ಮನ್ 825 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Copyright � 2012 Kannadaprabha.com