Kannadaprabha The New Indian Express
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್ ' ಚಿತ್ರದಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರ 
By select 
11 Feb 2019 12:00:00 AM IST

ಮುಂಬೈ: ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ  ಅವರ ಮುಂದಿನ ಬಹು ನಿರೀಕ್ಷಿತ ''ಆರ್ ಆರ್ ಆರ್ " ಚಿತ್ರದಲ್ಲಿ  ಬಾಲಿವುಡ್ ನಟ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಅಜಯ್ ದೇವಗನ್ ಕಿರುಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು,  ಅವರ ಪಾತ್ರ ಕುರಿತಂತೆ ಕುತೂಹಲ ಮನೆಮಾಡಿದೆ.

ತಾನಾಜಿ ಹಾಗೂ ಅನ್ಸುಂಗ್ ವಾರಿಯರ್  ಚಿತ್ರದ ನಂತರ ಅವರು  ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.ಆರ್ ಆರ್ ಆರ್ ಮೂಲಕ ರಾಜಮೌಳಿ ಹಾಗೂ ಅಜಯ್ ದೇವಗನ್ ಎರಡನೇ ಬಾರಿ ಒಂದಾಗುತ್ತಿದ್ದಾರೆ.

2012ರಲ್ಲಿ ತೆರೆಗೆ ಬಂದ ತೆಲುಗು ಬ್ಲಾಕ್ ಬುಸ್ಟರ್ "ಈಗಾ" ಚಿತ್ರದ ಹಿಂದಿ ಆವೃತ್ತಿಗೆ  "ಮಾಖ್ಖಿಗೆ  49 ವರ್ಷದ ಸೂಪರ್ ಸ್ಟಾರ್ ಅಜಯ್ ದೇವಗನ್ ಧ್ವನಿ ನೀಡಿದ್ದರು. ಈಗ  ಆರ್ ಆರ್ ಆರ್ ಚಿತ್ರದ ಮೂಲಕ ಮತ್ತೆ ಈ ಜೋಡಿ ಒಂದಾಗುತ್ತಿದ್ದಾರೆ.

ಜ್ಯೂನಿಯರ್ ಎನ್ ಟಿ ರಾಮ ರಾವ್  ಹಾಗೂ ರಾಮ್ ಚರಣ್ ಅವರ ಪ್ರಮುಖ ಪಾತ್ರದೊಂದಿಗೆ ರಾಜಮೌಳಿ ನಿರ್ದೇಶಿಸುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ಅಜಯ್ ದೇವಗನ್ ಮತ್ತಿತರ ಬಾಲಿವುಡ್ ನಟರು ಅಭಿನಯಿಸುತ್ತಿದ್ದು,  300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ವರದಿಯಾಗಿದೆ.

ಕಮಲ್ ಹಾಸನ್ ಅಭಿನಯದಲ್ಲಿ ಮೂಡಿಬರುತ್ತಿರುವ ಇಂಡಿಯನ್ 2 ಚಿತ್ರದಲ್ಲೂ ಅಜಯ್ ದೇವಗನ್ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಅಂತಹ ಯಾವುದೇ ಆಪರ್ ಬಂದಿಲ್ಲ ಎಂದು ಅಜಯ್ ದೇವಗನ್ ಸ್ಪಷ್ಟಪಡಿಸಿದ್ದಾರೆ.

ಬೇರೊಂದು ಚಿತ್ರರಂಗದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಆದರೂ, ರಾಜ್ ಮೌಳಿ ಅವರ ಮುಂದಿನ ಚಿತ್ರದಲ್ಲಿ ಕಿರುಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Copyright � 2012 Kannadaprabha.com