Kannadaprabha The New Indian Express
ಬೆಂಗಳೂರು: ಬೈಕ್ ಗೆ ಬಿಎಂಟಿಸಿ ಬಸ್​ ಡಿಕ್ಕಿ, ಮೂವರು ಯುವಕರು ಸಾವು 
By select 
11 Feb 2019 12:00:00 AM IST

ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ಗೆ ಸೋಮವಾರ ಮೂವರು ಯುವಕರು ಬಲಿಯಾಗಿದ್ದು, ಬೈಕ್​ ಗೆ ಬಸ್ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇಂದು ಮಧ್ಯಾಹ್ನ ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗೆರೆ ಬಳಿ‌ ಈ ಭೀಕರ ಅಪಘಾತ ಸಂಭವಿಸಿದೆ. 

ಮೃತ ಯುವಕರನ್ನು ಪ್ರದೀಪ್, ಅವಿನಾಶ ಹಾಗೂ ಬಸವ ಎಂದು ಗುರುತಿಸಲಾಗಿದ್ದು, ಮಡಿವಾಳ, ಹಾರೋಹಳ್ಳಿ ಹಾಗೂ ಉತ್ತರಹಳ್ಳಿ ನಿವಾಸಿಗಳು ಎನ್ನಲಾಗಿದೆ.

ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಎಂಟಿಸಿ ಆಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ಧಾರೆ.

ಈ ಸಂಬಂಧ ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright � 2012 Kannadaprabha.com