Kannadaprabha The New Indian Express
ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಅಬ್ಬರ ಕಂಡು ಬೆಚ್ಚಿಬಿದ್ದು ಟ್ವೀಟ್ ಮಾಡಿದ ಯೂಟ್ಯೂಬ್‌! 
By select 
12 Feb 2019 12:00:00 AM IST

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದ್ದು ಟ್ರೈಲರ್ ನ ಅಬ್ಬರ ಕಂಡು ಸ್ವತಃ ಯೂಟ್ಯೂಬ್ ಟ್ವೀಟ್ ಮಾಡಿದೆ. 

ಅತೀ ಕಡಿಮೆ ಅವಧಿಯಲ್ಲಿ ಒಂದು ಕೋಟಿ ಜನ ವೀಕ್ಷಣೆ ಮಾಡೋ ಮೂಲಕ ಈ ಹಿಂದಿನ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಿದೆ. ಯಜಮಾನ ಟ್ರೈಲರ್ ವೇಗವನ್ನು ಕಂಡು ಬೆರಗಾಗಿರುವ ಯೂಟ್ಯೂಬ್ ಇಂಡಿಯಾ ಅಫೀಷಿಯಲ್ ಟ್ವೀಟರ್ ಪೇಜ್ ನಲ್ಲಿ ಯಜಮಾನ ಟ್ರೈಲರ್ ನ ತಾಕತ್ತು ಏನು ಎಂಬುದನ್ನು ವರ್ಣಿಸಲಾಗಿದೆ. ಈ ಅತಿಥಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ. ಈ ಟ್ರೈಲರ್ ನೋಡಿದಾಗ ಈ ವಿಚಾರ ನಿಮಗೂ ಮನವರಿಕೆಯಾಗುತ್ತೆ ಅಂತಾ ಬಣ್ಣಿಸಿದೆ. 

ಯಜಮಾನ ಚಿತ್ರವನ್ನು ಪಿ ಕುಮಾರ್ ನಿರ್ದೇಶನ ಮಾಡುತ್ತಿದ್ದು ದರ್ಶನಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿಯಿಸುತ್ತಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮಾರ್ಚ್ 1ರಂದು ರಾಜ್ಯಾದ್ಯಂತ ಭರ್ಜರಿ ಎಂಟ್ರಿ ಕೊಡುತ್ತಿದೆ. 

ಯಜಮಾನ ಟ್ರೈಲರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ: http://tempuri.org/tempuri.html

Copyright � 2012 Kannadaprabha.com