Kannadaprabha The New Indian Express
ಉಗ್ರ ದಾಳಿ: ಹುತಾತ್ಮ ಯೋಧರಿಗೆ ಮಧ್ಯ ಪ್ರದೇಶದಿಂದ 1 ಕೋಟಿ, ಉ.ಪ್ರದೇಶದಿಂದ 25 ಲಕ್ಷ ಪರಿಹಾರ ಘೋಷಣೆ 
By select 
15 Feb 2019 12:00:00 AM IST

ಲಖನೌ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ತಮ್ಮ ರಾಜ್ಯದ ಯೋಧರ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ ನೀಡುವುದಾಗಿ ಮಧ್ಯ ಪ್ರದೇಶ ಸರ್ಕಾರ ಶುಕ್ರವಾರ ಘೋಷಿಸಿದೆ.

ಉತ್ತರ ಪ್ರದೇಶ ಸರ್ಕಾರ ಸಹ ತಮ್ಮ ರಾಜ್ಯದ 12 ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮ ಯೋಧರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಸಕಲ ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯ ಸಂಸ್ಕಾರ ನಡೆಸಲಾಗುವುದು. ಜಿಲ್ಲಾಧಿಕಾರಿ ಹಾಗೂ ಎಸ್ಎಸ್ ಪಿ ಹೊರತುಪಡಿಸಿ ಸರ್ಕಾರದ ಪರವಾಗಿ ಒಬ್ಬ ಸಚಿವರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Copyright � 2012 Kannadaprabha.com