Kannadaprabha The New Indian Express
ಭಾರತದಲ್ಲಿ ಇಮ್ರಾನ್ ಖಾನ್ ಪೋಟೋ ಎತ್ತಂಗಡಿ ವಿಷಾಧನೀಯ - ಪಿಸಿಬಿ 
By select 
18 Feb 2019 12:00:00 AM IST

ಇಸ್ಲಾಬಾಮಾದ್: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ  ಭಾರತದಲ್ಲಿನ ಹಲವು ಕ್ರೀಡಾಂಗಣದಿಂದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಅವರ ಪೋಟೋ ಎತ್ತಂಗಡಿ ಮಾಡಿರುವುದು ವಿಷಾಧನೀಯ ಕ್ರಮವಾಗಿದೆ ಎಂದು  ಪಾಕಿಸ್ತಾನ ಕ್ರಿಕೆಟ್  ಮಂಡಳಿ ಹೇಳಿದೆ.

ಈ ಸಂಬಂಧ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆ ಸಂದರ್ಭದಲ್ಲಿ  ಬಿಸಿಸಿಐ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.

ರಾಜಕೀಯ ಪ್ರಕ್ಷುಬ್ದತೆಯನ್ನು ಅಂತ್ಯಗೊಳಿಸುವಲ್ಲಿ  ಕ್ರೀಡೆ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್  ಮಂಡಳಿ ವ್ಯವಸ್ಥಾಪಕ ನಿರ್ದೇಶಕ ವಾಸೀಂ ಖಾನ್ ಹೇಳಿದ್ದಾರೆ.

ದುಬೈನಲ್ಲಿ ಮುಂದಿನ ಐಸಿಸಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕ್ರೀಡೆ ಹಾಗೂ ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ನೋಡುವುದರಲ್ಲಿ ನಾವು ನಂಬಿಕೆ ಹೊಂದಿರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ದೇಶ ಹಾಗೂ ಜನರ ನಡುವೆ ಸಂಪರ್ಕ ಬೆಸೆಯುವಲ್ಲಿ ಪ್ರಮುಖ ಪಾತ್ರ ಪಾತ್ರವಹಿಸುತ್ತದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಆದರೆ, ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪಾಕಿಸ್ತಾನದ ಪ್ರಧಾನ ಮಂತ್ರಿ  ಇಮ್ರಾನ್ ಖಾನ್ ಅವರ ಪೋಟೋವನ್ನು ಭಾರತದಲ್ಲಿನ  ಹಲವು ಕ್ರೀಡಾಂಗಣದಿಂದ ಎತ್ತಂಗಡಿ ಮಾಡಿರುವುದು ಗಂಭೀರವಾದ ವಿಷಾದನೀಯ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

Copyright � 2012 Kannadaprabha.com