Kannadaprabha The New Indian Express
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 'ಕೆಜಿಎಫ್‌'ಗೆ ವರ್ಷದ ಜನಪ್ರಿಯ ಸಿನಿಮಾ ಪಟ್ಟ! 
By select 
01 Mar 2019 12:00:00 AM IST

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್‌' ಚಿತ್ರವು 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ವರ್ಷದ ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ. 

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾವನ್ನು  ನಿರ್ಮಾಪಕ ವಿಜಯ್ ಕಿರಂಗದೂರು ನಿರ್ಮಿಸಿದ್ದರು. 

'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ದ್ವಿತೀಯ ಹಾಗೂ 'ಟಗರು' ತೃತೀಯ ಪ್ರಶಸ್ತಿ ಪಡೆದುಕೊಂಡಿವೆ. ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಗುರುವಾರ ನಡೆದ ಸಿನಿಮೋತ್ಸವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮೂಕಜ್ಜಿಯ ಕನಸುಗಳು ಚಿತ್ರಕ್ಕೆ ಕನ್ನಡ ಚಲನಚಿತ್ರ ಅಕಾಡೆಮಿ ಪ್ರಶಸ್ತಿ  ಲಭಿಸಿದೆ, ಪಿ.ಶೇಷಾದ್ರಿ ನಿರ್ದೇಶನದ ಈ ಸಿನಿಮಾಗೆ ನವ್ಯಚಿತ್ರ ಕ್ರಿಯೇಷನ್ ನಿರ್ಮಾಣ ಮಾಡಿದೆ. 

ಮನ್ಸೋರೆ ನಿರ್ದೇಶನದ ನಾತಿಚರಾಮಿ ಸಿನಿಮಾ  ಅಂತಾರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿ ಪಡೆದಿದೆ.

ಘೋಡೆ ಕೊ ಜಲೇಬಿ ಖಿಲಾನೆ ಲೆ ಜಾ ರಿಯಾ ಹೂನ್‌ ಸಿನಿಮಾಗೆ ಉತ್ತಮ ಭಾರತೀಯ ಸಿನಿಮಾ ವಿಭಾಗದ ಪ್ರಶಸ್ತಿ ಪಡೆದುಕೊಂಡಿದೆ.

ಅರೂಪ್‌ ಮನ್ನಾ ಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ಶಿವರಂಜಿನಿ ಆ್ಯಂಡ್‌ ಅದರ್‌ ವುಮೆನ್‌ ಗೆ ಉತ್ತಮ ಏಷ್ಯನ್‌ ಸಿನಿಮಾ  ಲಭಿಸಿದೆ.

Copyright � 2012 Kannadaprabha.com