Kannadaprabha The New Indian Express
ಡಿಯರ್ ಕಾಮ್ರೆಡ್ ಟೀಸರ್ ಔಟ್: ಮತ್ತೆ ಮಿಂಚಿದ ವಿಜಯ್ ದೇವರಕೊಂಡ-ರಶ್ಮಿಕಾ ಜೋಡಿ! 
By select 
17 Mar 2019 12:00:00 AM IST

ಬೆಂಗಳೂರು: ತೆಲುಗಿನ "ಗೀತಾ ಗೋವಿಂದಂ" ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಒಂದಾಗಿದೆ. "ಡಿಯರ್ ಕಾಮ್ರೆಡ್" ಎಂಬ ಚಿತ್ರದಲ್ಲಿ ಈ ಜೋಡಿ ಮತ್ತೆ ಪ್ರೇಕಷಕರಿಗೆ ಮೋಡಿ ಮಾಡಲು ಬರುತ್ತಿದ್ದು ಭಾನುವಾರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಏಳು ಸೆಂಕೆಂಡ್ ನ ಈ ಟೀಸರ್ ನಲ್ಲಿ ನಟ ವಿಜಯ್ ಮಾಸ್ ಹಾಗೂ ರೊಮ್ಯಾಂಟಿಕ್ ಎರಡೂ ಶೇಡ್ ನಲ್ಲಿ ಕಾಣಿಸಿದ್ದರೆ ನಟಿ ರಶ್ಮಿಕಾ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಹಿಂದಿನ ಚಿತ್ರ ಗೀತಾ ಗೋವಿಂದಂ ನಂತೆಯೇ ಇಲ್ಲಿಯೂ ರಶ್ಮಿಕಾ ಹಾಗೂ ವಿಜಯ್ ಲ್ಕಿಪ್ ಲಾಕ್ ಸೀನ್ ಇದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
"ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಮನಸು" ಎಂಬ ಹಾಡಿನ ಸಾಲಿನೊಡನೆ ಟೀಸರ್ ಪ್ರಾರಂಭವಾಗುತ್ತದೆ.

ಭರತ್ ಕಾಮಾ ನಿದೇಶದ ಈ ಚಿತ್ರದ ಟೀಸರ್ ಲಿಂಕ್ ಗಳನ್ನು ನಟಿ ರಶ್ಮಿಕಾ ಟ್ವೀಟ್ ಮೂಲಕ ಹಂಚಿಕೊಂಡಿದ್ದು "ಡಿಯರ್ ಕಾಮ್ರೆಡ್ ಟೀಸರ್ ಇದು, ಹೆಚ್ಚು ಬಯಸುವಿರಾ? ಶೀಘ್ರದಲ್ಲೇ ಬರಲಿದೆ!" ಎಂದು ಬರೆದುಕೊಂಡಿದ್ದಾರೆ.

ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿ ನಿರ್ಮಾಣದ ಈ ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ಸಂಗೀತ, ಸಂಯೋಜಿಸಿದ್ದಾರೆ.

Copyright � 2012 Kannadaprabha.com