Kannadaprabha The New Indian Express
ಮೈದಾನದಲ್ಲಿ ಮತ್ತೆ ಧೋನಿಯ ತುಂಟಾಟ; ಅಭಿಮಾನಿ ಕೈಗೆ ಸಿಗದೆ ಓಡಾಡಿಸಿದ ಮಾಹಿ, ವಿಡಿಯೋ ವೈರಲ್! 
By select 
18 Mar 2019 12:00:00 AM IST

ಚೆನ್ನೈ: ತಮ್ಮ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಿಗಿರುತ್ತದೆ. ಅದೇ ರೀತಿ ತನ್ನನ್ನು ಹಿಡಿಯಲು ಬಂದ ಅಭಿಮಾನಿಯ ಕೈಗೆ ಸಿಗದೇ ಮೈದಾನದಲ್ಲೇ ಎಂಎಸ್ ಧೋನಿ ತುಂಟಾಟ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಪಂದ್ಯ ನಡೆದಿತ್ತು. ಈ ವೇಳೆ ಧೋನಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನೇರವಾಗಿ ಮೈದಾನದಕ್ಕೆ ನುಗ್ಗಿದ್ದಾನೆ. ಅಭಿಮಾನಿ ಹತ್ತಿರ ಬರುತ್ತಿದ್ದಂತೆ ಧೋನಿ ಕೆಲ ಕಾಲ ಆತನ ಕೈಗೆ ಸಿಗದೆ ಮೈದಾನದಲ್ಲಿ ಓಡಾಡಿದ್ದಾರೆ. 

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿ ವೇಳೆ ಸಹ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಧೋನಿಯನ್ನು ಅಪ್ಪಿಕೊಳ್ಳಲು ಮುಂದಾಗಿದ್ದ. ಈ ವೇಳೆಯಲ್ಲೂ ಧೋನಿ ಆತನ ಕೈಗೆ ಸಿಗದೆ ಮೈದಾನದಲ್ಲಿ ಓಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. 

Copyright � 2012 Kannadaprabha.com