Kannadaprabha The New Indian Express
ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ನಾಲ್ವರ ಗ್ಯಾಂಗ್ ಅರೆಸ್ಟ್ 
By select 
16 Apr 2019 12:00:00 AM IST

ಬೆಂಗಳೂರು: ಜನರಿಗೆ ಡ್ರಾಪ್ ಕೊಡುವ ನೆಪದಲ್ಲಿ  ಸಾರ್ವಜನಿಕರ ದರೋಡೆ ಮಾಡುತ್ತಿದ್ದ ನಾಲ್ವರ ಗ್ಯಾಂಗ್ ಒಂದನ್ನು ಬೆಂಗಳೂರು ಬ್ಯಾಟರಾಯನಪುರ ಪೋಲೀಸರು ಬಂಧಿಸಿದ್ದಾರೆ. ಕಳೆದ ವಾರ ಈ ಗ್ಯಾಂಗ್ ಕೇರಳ ಮೂಲದ ಎಂಎನ್ ಸಿ ಉದ್ಯೋಗಿಯೊಬ್ಬನನ್ನು ಅಪಹರಿಸಿ ಲೂಟಿ ಮಾಡಿದೆ.

ಬಂಧಿತರನ್ನು ಅಬು ಸುಲೇಮಾನ್ (24), ಖಲಂದರ್ (19,), ಸಲೀಂ ಪಾಷಾ ( 23) ಹಾಗೂ ಅಬ್ದುಲ್ ಸಾಹಿಲ್ (20) ಎಂದು ಗುರುತಿಸಲಾಗಿದೆ.ಇವರೆಲ್ಲರೂ ಚಂದ್ರಾ ಲೇಔಟ್ ನಿವಾಸಿಗಳಾಗಿದ್ದಾರೆ.ಈ ಹಿಂದೆ ಇದೇ ಗ್ಯಾಂಗ್ ಕೆಂಗೇರಿ, ಕೋಡಿಗೆಹಳ್ಳಿ ಹಾಗೂ ಮದ್ದೂರು ಪ್ರದೇಶದಲ್ಲಿ ಸಕ್ರಿಯವಾಗಿತ್ತು. ಇವರ ಬಂಧನದಿಂಡ ನಾಲ್ಕು ಇದೇ ಬಗೆಯ ಪ್ರಕರಣಗಳು ಪರಿಹಾರವಾಗಿದ್ದವು.

ನಾವು ಅಪಹರಣಕ್ಕೆ ಬಳಸಿದ್ದ ಕಾರ್ ಮಾಲೀಕರಾದ ಮುಕುಬ್ ಸಾಲುಕ್ಕರ್ ಅವರನ್ನು ವಿಚಾರಣೆ ನಡೆಸಿದೆವು, ಆಗ ಆ ವ್ಯಕ್ತಿ ಈ ಆರೋಪಿಗಳ ಹೆಸರನ್ನು ಹೇಳಿದ್ದ. ಆರೋಪಿಗಳು ಇವರಿಂದ ತಿಂಗಳಿಗೆ  20,ಸಾವಿರ ರು. ಬಾಡಿಗೆಗಾಗಿ ಈ ಕಾರ್ ಪಡೆದಿದ್ದರು.ಈಗ ಈ ಆರೋಪಿಗಳ ಮನೆ ಶೋಧಕಾರ್ಯ ಕೈಗೊಂಡಿದ್ದು ಮನೆಯಲ್ಲಿ ಚಿನ್ನ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾಗಿ ಪೋಲೀಸರು ಹೇಳಿದ್ದಾರೆ.

Copyright � 2012 Kannadaprabha.com